ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಪು ಮಾರಿಗುಡಿಯ ನಡೆ ಹಿಂದು ಸಮಾಜಕ್ಕೆ ಮಾದರಿಯಾಗಲಿ

ಕಾಪು ಮಾರಿಗುಡಿಯ ನಡೆ ಹಿಂದು ಸಮಾಜಕ್ಕೆ ಮಾದರಿಯಾಗಲಿ



ಉಡುಪಿ ಜಿಲ್ಲೆಯ ಅತ್ಯಂತ ಪ್ರಸಿದ್ಧ ಶ್ರದ್ಧಾ ಕೇಂದ್ರಗಳಲ್ಲಿ ಒಂದಾಗಿರುವ ಕಾಪು ತಾಲೂಕಿನ ಮಾರಿಗುಡಿಯ ಆಡಳಿತ ಮಂಡಳಿ ದೇಶದ ಸಮಸ್ತ ಹಿಂದೂ ಸಮಾಜದ ಕಣ್ತೆರೆಸುವ ದಿಟ್ಟ ಹೆಜ್ಜೆಯೊಂದರ ಮೂಲಕ ಸುದ್ದಿಯಾಗಿದೆ.


ಕ್ಷೇತ್ರದಲ್ಲಿ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ನಡೆಯುವ ವರ್ಷಾವಧಿ ಸುಗ್ಗಿ ಮಾರಿಪೂಜೆ ಜಾತ್ರೆಯಲ್ಲಿ ಕೋಳಿ, ಹಣ್ಣು, ಹೂ ಇತರೆ ತರಹೇವಾರಿ ವಸ್ತುಗಳ ವ್ಯಾಪಾರದಲ್ಲಿ ನೂರಾರು ಅನ್ಯಧರ್ಮೀಯರೇ ಮೇಲಾಟ ನಡೆಸುತ್ತಿದ್ದರು.


ಅನೇಕ ವರ್ಷಗಳಿಂದ ಹಿಂದೂ ಸಂಘಟನೆಗಳು ಇದನ್ನು ಗಮನಿಸುತ್ತಿದ್ದುದು ಮಾತ್ರವಲ್ಲ ಈ ಬಗ್ಗೆ ಎಚ್ಚರ ಇರಬೇಕಾದ ಅಗತ್ಯತೆಯ ಬಗ್ಗೆಯೂ ಭಕ್ತರಿಗೆ ಹಾಗೂ ಆಡಳಿತ ಮಂಡಳಿಗೆ ಮನವರಿಕೆ ಮಾಡಿಸುತ್ತಲೇ ಇದ್ದವು.


ಅದೆಲ್ಲದರ ಪರಿಣಾಮ ಮತ್ತು ದೇಶದಲ್ಲಿ ವರ್ತಮಾನದಲ್ಲಿ ಹಿಂದೂ ಸಮಾಜವೆದುರಿಸುತ್ತಿರುವ ಗಂಭೀರ ಸವಾಲುಗಳ ಹಿನ್ನೆಲೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಸಭೆ ಸೇರಿ ಈ ವರ್ಷದಿಂದ ಕ್ಷೇತ್ರದ ಜಾತ್ರೆಗಳಲ್ಲಿ ಹಿಂದೂಗಳು ಮಾತ್ರ ವ್ಯಾಪಾರ ನಡೆಸುವಂತೆ ನಿರ್ಣಯ ಕೈಗೊಂಡಿದೆ.‌ ಇದು ಕ್ಷೇತ್ರ ಮಾತ್ರವಲ್ಲ ಇಡೀ ಹಿಂದು ಸಮಾಜಕ್ಕೆ ಒಂದು ಮಹತ್ವದ ಬೆಳವಣಿಗೆಯಾಗಿದೆ.


ನಾಡಿನಲ್ಲಿರುವ ಅಸಂಖ್ಯ ಹಿಂದೂ ಶ್ರದ್ಧಾಕೇಂದ್ರಗಳು ಇಂತಹ ಮಾದರಿ ಹಾಗೂ ದಿಟ್ಟ ನಿರ್ಣಯ ಕೈಗೊಳ್ಳಲು ಸ್ಫೂರ್ತಿಯಾಗುವಂತಹ ನಿರ್ಣಯ ಕೈಗೊಂಡಿರುವ ಕಾಪು ಮಾರಿಗುಡಿಯ ಆಡಳಿತ ಮಂಡಳಿಗೆ ಸಮಸ್ತ ಹಿಂದು ಸಮಾಜ  ಆಭಾರ ವಂದನೆ ಸಹಿತ ಬಹುಪರಾಕ್ ಎನ್ನಲೇ ಬೇಕಾಗಿದೆ.


ದೇಶ- ದೇಶದ ಸಂವಿಧಾನ, ದೇಶದ  ಕಾನೂನು, ದೇಶದ ಸೇನೆ, ಹಾಗೂ ದೇಶದ ಸಾರ್ವಭೌಮತೆಗೆ ಸವಾಲೆಸೆಯುವ ಯಾವುದೇ ದುಷ್ಟ ಶಕ್ತಿಗಳಿಗೆ ನಾವೆಲ್ಲ ಇದೇ ರೀತಿಯ ಚಾಟಿ ಏಟು ಕೊಡಬೇಕಾಗಿರುವುದು ಸಂದರ್ಬದ ಅನಿವಾರ್ಯತೆಯೂ ಆಗಿದೆ.


ಸೌಹಾರ್ದ, ಸಾಮರಸ್ಯ, ಸಮಾನತೆಗಳು ಯಾವತ್ತೂ ಒಂದು ಕೈಯ ಚಪ್ಪಾಳೆಯಾಗಲು ಸಾಧ್ಯವೇ ಇಲ್ಲ ಎನ್ನುವ ಸತ್ಯದ ಅರಿವನ್ನು ಈ ರೀತಿಯಾಗಿ ಹಿಂದು ಸಮಾಜ ಮೂಡಿಸಬೇಕು. ಈ ಅಭಿಯಾನ ನಿರಂತರವಾಗಲಿ. ಇದಕ್ಕೆ ದೈವೀ ಶಕ್ತಿಗಳ ಅನುಗ್ರಹದ ರಕ್ಷೆ ಮತ್ತು ಸಮಸ್ತ ಸಮಾಜದ ಸಹಕಾರ ಒದಗಲಿ.

-ಜಿ. ವಾಸುದೇವ ಭಟ್ ಪೆರಂಪಳ್ಳಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post