ಮಂಗಳೂರು: ಮಹಾನಗರ ಪಾಲಿಕೆಯ ಜಪ್ಪಿನಮೊಗರು ವಾರ್ಡಿನ ಚಿಂತನ ರಸ್ತೆಯ ಬಳಿ ಬೃಹತ್ ರಾಜಕಾಲುವೆಯ ಆಯ್ದ ಭಾಗಗಳಲ್ಲಿ 1.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ರಾಜಕಾಲುವೆಯಿಂದ ನೀರು ಉಕ್ಕಿ ಸಮಸ್ಯೆ ಉಂಟಾಗುವ ಕಡೆಗಳಲ್ಲಿ ಈಗಾಗಲೇ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಚಿಂತನ ರಸ್ತೆಯಲ್ಲಿರುವ ರಾಜಕಾಲುವೆಯಲ್ಲಿಯೂ ಕೂಡ ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ಉಕ್ಕಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ 1.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾರ್ಪೊರೇಟರ್ ವೀಣಾ ಮಂಗಳ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಪ್ರಮುಖರಾದ ರಾಮಪ್ರಸಾದ್ ಶೆಟ್ಟಿ, ಸಂದೇಶ ಶೆಟ್ಟಿ, ನವೀನ್ ಕೊಟ್ಟಾರಿ, ಪುಷ್ಪರಾಜ್, ದೀಪಕ್, ಸುಜಾತ ಕೊಟ್ಟಾರಿ, ಜನಾರ್ದನ್, ನಾಗೇಶ್, ರಾಘವೇಂದ್ರ, ರಾಜೇಂದ್ರ, ಶಿವಾನಂದ, ಲಿಲ್ಲಿ ವಿನ್ಸೆಂಟ್ ಡಿಸೋಜಾ, ಸುಜಾತ, ರೇಣುಕಾ ಶೆಟ್ಟಿ, ಪ್ರಶಾಂತ್, ರಾಜು, ಯಶೋಧರ್ ಚೌಟ, ಕಿರಣ್ ರೈ, ರವಿ ಎಕ್ಕೂರ್, ಪ್ರವೀಣ್ ಕುಮಾರ್, ಸುಜಾತ, ಸುಂದರ, ಮೀನಾಕ್ಷಿ, ಯೋಗೇಶ್, ನಾಗೇಶ್ ಎಕ್ಕೂರ್, ಬಚ್ಚನ್ನ, ಕಿಶೋರ್, ಸಂಧ್ಯಾರಾಣಿ, ಸೂರಜ್, ದೀಕ್ಷಾ ರಾವ್ ಪಾಲ್ಗೊಂಡಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment