ಮುದ್ದೇಬಿಹಾಳ: ಬೆಂಗಳೂರಿನ ಸರ್ಜಾಪುರದಲ್ಲಿ ವಿದ್ಯುತ್ ಕಂಬ ಏರಿ ದುರಸ್ಥಿ ಕಾರ್ಯ ನಡೆಸುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಕಂಬದಿಂದ ಬಿದ್ದು, ಲೈನಮನ್ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ರೂಢಗಿ ತಾಂಡಾದ ಲೈನಮನ್ ಪವನ್ ರಾಮಪ್ಪ ಚವ್ಹಾಣ (27) ಮೃತಪಟ್ಟ ದುರ್ಧೈವಿ.
ಮೃತ ಪವನ್ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದು, ಕೆಲ ವರ್ಷಗಳ ಹಿಂದೆ ಐಟಿಐ ವಿದ್ಯಾರ್ಹತೆಯ ಮೇಲೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಜೂನಿಯರ್ ಲೈನ್ ಮ್ಯಾನ್ ಆಗಿ ಕರ್ತವ್ಯಕ್ಕೆ ಸೇರಿದ್ದರು ಎಂದು ತಿಳಿದು ಬಂದಿದೆ.
Post a Comment