ಬಾಗಲಕೋಟೆ: ತಾಲ್ಲೂಕಿನ ಹೊನ್ನಾಕಟ್ಟಿ ಬಳಿ ಮಂಗಳವಾರ ಬೆಳಿಗ್ಗೆ ಟ್ರಕ್‌ವೊಂದು ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಅಂದಾಜು ಎರಡು ಸಾವಿರ ಕೋಳಿಗಳು ಮೃತಪಟ್ಟಿವೆ.
ಬೆಳಗಾವಿಯಿಂದ ಆಂಧ್ರದ ಎಮ್ಮಿಗನೂರಿಗೆ ತೆರಳುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ವಾಹನದಲ್ಲಿ ಐದು ಸಾವಿರ ಕೋಳಿಗಳಿದ್ದವು. ಸ್ಥಳೀಯ ಫಾರ್ಮ್‌ಗಳಿಂದ ಕೋಳಿ ಖರೀದಿಸಿ ಎಮ್ಮಿಗನೂರಿಗೆ ಮಾರಾಟಕ್ಕೆ ಕಳುಹಿಸುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment