ಧಾರವಾಡ: ನಗರದ ಹೊಸಯಲ್ಲಾಪುರ ಪ್ರದೇಶದಲ್ಲಿ ಬಾಡಿ ಬಿಲ್ಡರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಡೆದಿದೆ.
ಬಾಡಿ ಬಿಲ್ಡರ್ ಪ್ರಭಾಕರ ಆನಂದಪ್ಪ ಕಬ್ಬಾರ ಎಂಬಾತ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಮನೆಯಲ್ಲಿನ ಮೇಲ್ಚಾವಣಿಗೆ ಹಗ್ಗ ಕಟ್ಟಿಕೊಂಡು ನೇಣು ಹಾಕಿಕೊಂಡಿದ್ದಾನೆ.
ಸುಮಾರು 40 ವರ್ಷದ ಪ್ರಭಾಕರ, ಕೆಲವು ದಿನಗಳಿಂದ ಆಟೋ ಓಡಿಸಿ ಕೊಂಡು ಜೀವನ ನಡೆಸುತ್ತಿದ್ದ.
ಇಸ್ಪೀಟ್ ಆಟಕ್ಕೆ ಬಿದ್ದು ಬದುಕನ್ನು ಸಾಲದಲ್ಲಿ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಹಲವಾರು ಒಳ್ಳೆಯ ಜನರೊಂದಿಗೆ ಸಂಪರ್ಕದಲ್ಲಿದ್ದ ಪ್ರಭಾಕರ, ಇಸ್ಪೀಟ್ ಆಟಕ್ಕೆ ಮುಂದಾಗಿದ್ದು, ಕಳೆದ ಒಂದು ವರ್ಷದಿಂದ ಬಹುತೇಕರ ಸಂಪರ್ಕದಿಂದ ದೂರವುಳಿದಿದ್ದನೆಂದು ಹೇಳಲಾಗಿದೆ.
ಅತಿಯಾದ ಇಸ್ಪೀಟ್ ನಿಂದ ಸಾಲ ಹೆಚ್ಚಾಗಿತ್ತೆಂದು ಗೊತ್ತಾಗಿದ್ದು, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿ, ಮುಂದಿನ ಕಾನೂನು ಕ್ರಮವನ್ನು ಜರುಗಿಸಿದ್ದಾರೆ.
Post a Comment