ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೈಕ್ ಕಳ್ಳತನ; ನಾಲ್ವರು ಆರೋಪಿಗಳು ಬಂಧನ

ಬೈಕ್ ಕಳ್ಳತನ; ನಾಲ್ವರು ಆರೋಪಿಗಳು ಬಂಧನ

 


ರಾಯಚೂರು: ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನೇತಾಜಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ರಾಯಚೂರಿನ ಅಶೋಕ ನಗರದ ಆಂಜನೇಯ ಕೊರವರು, ಬಾಪೂರ ಗ್ರಾಮದ ಮಹೇಶ ನಾಯಕ, ಬಾಲಕೃಷ್ಣ ಕೊರವರು ಹಾಗು ಮಿಟ್ಟಿಮಲ್ಕಾಪುರ ಗ್ರಾಮದ ಭಗತ್‌ಸಿಂಗ್ ಕೊರವರು ಬಂಧಿತರು.

ಶನಿವಾರ ಬೊಳಮಾನದೊಡ್ಡಿ ರಸ್ತೆಯಲ್ಲಿ ಆರೋಪಿಗಳು ನಂಬರ್ ಪ್ಲೇಟ್‌ ಇಲ್ಲದ ಎರಡು ಬೈಕ್‌ಗಳಲ್ಲಿ ತೆರಳುತ್ತಿದ್ದರು.

ಇದರಿಂದ ಅನುಮಾನಗೊಂಡಿರುವ ಕರ್ತವ್ಯನಿರತ ಪೊಲೀಸರು ತಡೆದಿದ್ದಾರೆ. ಈ ವೇಳೆ ಪರಾರಿಯಾಗಲು ಮುಂದಾದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ವಿಚಾರಣೆ ನಡೆಸಿದಾಗ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ನಗರದ ಮಾರ್ಕೆಟ್ ಯಾರ್ಡ್, ನೇತಾಜಿ ನಗರ, ಸದರ್ ಬಜಾರ್ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿರುವುದು ಗೊತ್ತಾಗಿದೆ.

ಬಂಧಿತರಿಂದ ಒಟ್ಟು 3.65 ಲಕ್ಷ ರೂಪಾಯಿ ಮೌಲ್ಯದ 10 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

hit counter

0 Comments

Post a Comment

Post a Comment (0)

Previous Post Next Post