ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ವಿದ್ಯಾರ್ಥಿಗಳಿಗೆ 125 ಕಂಪ್ಯೂಟರ್ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರು ಶನಿವಾರ ಚಾಲನೆ ನೀಡಿದರು.
ಬಂಟ್ವಾಳ: ಜಗತ್ತಿಗೆ ಶಿಕ್ಷಣ ನೀಡಿದ ಭಾರತದಲ್ಲಿ ಇಂದಿಗೂ ಶಿಕ್ಷಣ ಪದ್ಧತಿ ಮತ್ತು ಗುಣಮಟ್ಟ ಉತ್ತಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಶ್ವವೇಗದಲ್ಲಿ ಮುನ್ನಡೆಯುತ್ತಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಸರ್ಕಾರದ ಜೊತೆಗೆ ರೋಟರಿ ಕ್ಲಬ್ ಕೂಡಾ ಮಹತ್ತರ ಕೊಡುಗೆ ನೀಡಿ ಇತರರಿಗೆ ಮಾದರಿಯಾಗಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಸಕರ್ಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಬಿ.ಸಿ.ರೋಡು ಸಿಟಿ ಮತ್ತು ಲೊರೆಟ್ಟೋ ಹಿಲ್ಸ್ ಹಾಗೂ ಉಪ್ಪಿನಂಗಡಿ ರೋಟರಿ ಕ್ಲಬ್ ವತಿಯಿಂದ ಇನ್ಫೋಸಿಸ್ ನೆರವಿನಲ್ಲಿ ಶನಿವಾರ 125 ಉಚಿತ ಕಂಪ್ಯೂಟರ್ ವಿತರಿಸಿ ಅವರು ಮಾತನಾಡಿದರು.
ಉಕ್ರೇನ್ ನಿಂದ 18 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ವಾಪಾಸ್ ಕರೆತರುವಲ್ಲಿ ದೇಶ ಯಶಸ್ವಿಯಾಗಿದ್ದು, ನಾವು ಧನಾತ್ಮಕ ಚಿಂತನೆ ಮೈಗೂಡಿಸಿದಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು.
ರೂ 10 ಕೋಟಿ ಪ್ರಸ್ತಾವನೆ:
ಈಗಾಗಲೇ ಪಾಲಿಟೆಕ್ನಿಕ್ ನಲ್ಲಿ ರೂ 3.25 ಕೋಟಿ ವೆಚ್ಚದಲ್ಲಿ ವಿಸ್ತೃತ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಕ್ಯಾಂಟೀನ್ ಮತ್ತು ಗ್ರಂಥಾಲಯಕ್ಕೆ ತಲಾ ರೂ 5 ಲಕ್ಷ ಅನುದಾನ ನೀಡಿದ್ದು, ಸ್ಥಳೀಯ ಜಮೀನು ಸಮಸ್ಯೆ ನಿವಾರಣೆಯಾದರೆ ಪರ್ಯಾಯ ರಸ್ತೆ ರಚನೆಗೆ ರೂ 10 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಿರಂತರ ಅಧ್ಯಯನಶೀಲತೆ ಮತ್ತು ಆತ್ಮವಿಶ್ವಾಸ ಇದ್ದಾಗ ದೇಶಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದರು.
ಪ್ರಾಂಶುಪಾಲೆ ಉಷಾ ಡಿ.ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಹಾಯಕ ಗವರ್ನರ್ ಸುರೇಂದ್ರ ಕಿಣಿ, ವಲಯ ಕಾರ್ಯದರ್ಶಿ ಜಯರಾಮ ರೈ, ವಲಯ ಸೇನಾನಿ ಅವಿಲ್ ಮೆನೇಜಸ್, ಬಿ.ಸಿ. ರೋಡ್ ಸಿಟಿ ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಕೆ. ಪದ್ಮನಾಭ ರೈ, ಉಪ್ಪಿನಂಗಡಿ ಕ್ಲಬ್ಬಿನ ಅಧ್ಯಕ್ಷ ನೀರಜ್ ಶುಭ ಹಾರೈಸಿದರು. ಪಾಲಿಟೆಕ್ನಿಕ್ ರಿಜಿಸ್ಟ್ರಾರ್ ಒಫಿಲಿಯಾ ಡಿಸೋಜ ಮತ್ತಿತರರು ಇದ್ದರು.
ರೋಟರಿ ಕ್ಲಬ್ ಸಿಟಿ ಅಧ್ಯಕ್ಷ ಕೆ. ಸತೀಶ್ ಕುಮಾರ್ ಸ್ವಾಗತಿಸಿ, ಲೊರೆಟ್ಟೋ ಹಿಲ್ಸ್ ಅಧ್ಯಕ್ಷ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಪ್ರಸ್ತಾವಿಕ ಮಾತನಾಡಿದರು. 'ವಿದ್ಯಾಸೇತು' ಯೋಜನೆಯಡಿ ರೋಟರಿ ಕ್ಲಬ್ ಡಿಜಿಟಲ್ ಇಂಡಿಯಾ ಕನಸು ನನಸು ಮಾಡುತ್ತಿದೆ ಎಂದರು. ಉಪನ್ಯಾಸಕ ಮೋಹನ್. ಎನ್ ವಂದಿಸಿದರು. ಕ್ಲಬ್ಬಿನ ಕಾರ್ಯದರ್ಶಿ ಕೆ. ರಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment