ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಿಲ್ಲಾ ಗೃಹರಕ್ಷಕದಳದ 15 ಘಟಕಾಧಿಕಾರಿಗಳ ಸಭೆ

ಜಿಲ್ಲಾ ಗೃಹರಕ್ಷಕದಳದ 15 ಘಟಕಾಧಿಕಾರಿಗಳ ಸಭೆ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ 15 ಘಟಕಗಳ ಘಟಕಧಿಕಾರಿಗಳ ಸಭೆ ನಗರದ ಮೇರಿಹಿಲ್ ನಲ್ಲಿರುವ ಗೃಹರಕ್ಷಕದಳದ ಕಚೇರಿಯಲ್ಲಿ ಶುಕ್ರವಾರ (ಮಾ.11) ಜರುಗಿತು. ಗೃಹರಕ್ಷಕದಳ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಮುಂಬರುವ ಚುನಾವಣಾ ಕರ್ತವ್ಯಕ್ಕೆ ಗೃಹರಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಕೋವಿಡ್ ಲಸಿಕೆ ಹಾಕಿಸಲು ಬಾಕಿ ಇರುವ ಗೃಹರಕ್ಷಕರಿಗೆ ಕೋವಿಡ್ ಲಸಿಕೆ ಹಾಕಿಸುವಂತೆ ಮನವರಿಕೆ ಮಾಡಲು ಘಟಕಾಧಿಕಾರಿಗಳಿಗೆ ಸೂಚಿಸಲಾಯಿತು.


ಗೃಹರಕ್ಷಕರ ಕ್ಷೇಮಾಭಿವೃದ್ಧಿ ನಿಧಿಗೆ ವಂತಿಗೆಯನ್ನು ಕಟ್ಟಲು ಬಾಕಿ ಇರುವ ಗೃಹರಕ್ಷಕರ ಬಗ್ಗೆ ಚರ್ಚಿಸಲಾಯಿತು. ಮೂರು ವರ್ಷಗಳನ್ನು ಮೀರಿದ ಗೃಹರಕ್ಷಕರು ನವೀಕರಣ ಮಾಡಿಸಲು ಸೂಚಿಸಲಾಯಿತು.


ಉಪ ಸಮಾದೇಷ್ಟರಾದ ರಮೇಶ್ ಅವರು ಸ್ವಾಗತ ಭಾಷಣ ಮಾಡಿದರು. ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಅವರು ವಂದನಾರ್ಪಣೆಯನ್ನು ಮಾಡಿದರು. ಕಚೇರಿಯ ಅಧೀಕ್ಷಕರಾದ ರತ್ನಾಕರ ಮತ್ತು ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್ ರವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ 15 ಘಟಕಗಳ ಘಟಕಾಧಿಕಾರಿಗಳಾದ ಮಾರ್ಕ್ ಶೇರ, ಸೀನಿಯರ್ ಪ್ಲಟೂನ್ ಕಮಾಂಡರ್, ಮಂಗಳೂರು ಘಟಕ, ಐತಪ್ಪ, ಘಟಕಾಧಿಕಾರಿ, ಬಂಟ್ವಾಳ ಘಟಕ, ತೀರ್ಥೇಶ್, ಕಡಬ ಘಟಕ, ಪ್ರಭಾರ ಘಟಕಾಧಿಕಾರಿಗಳಾದ ಹರಿಶ್ಚಂದ್ರ, ಸುಬ್ರಹ್ಮಣ್ಯ ಘಟಕ, ಎಂ ಭಾಸ್ಕರ್, ಉಳ್ಳಾಲ ಘಟಕ, ಲೋಕೇಶ್, ಮುಲ್ಕಿ ಘಟಕ, ದಿನೇಶ್ ಉಪ್ಪಿನಂಗಡಿ ಘಟಕ, ಶಿವಪ್ಪ ನಾಯ್ಕ್, ಪಣಂಬೂರು ಘಟಕ, ರಮೇಶ್, ಸುರತ್ಕಲ್ ಘಟಕ, ಸಂಜೀವ, ವಿಟ್ಲ ಘಟಕ, ಜಯಾನಂದ ಬೆಳ್ತಂಗಡಿ ಘಟಕ, ಪಿ. ಟಿ ಗಿರಿಧರ್, ಸುಳ್ಯ ಘಟಕ, ಸುದರ್ಶನ್ ಜೈನ್, ಸಾರ್ಜೆಂಟ್ ಪುತ್ತೂರು ಘಟಕ, ಲಾರೆನ್ಸ್ ಡಿಸೋಜ, ಸೆಕ್ಷನ್ ಲೀಡರ್, ಮೂಡಬಿದ್ರೆ ಘಟಕ  ಇವರುಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post