ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ಲೇಖಕ ಬಾಳಿಕೆ ಟಿ.ಕೆ ಆಳ್ವ ನಿಧನ

ಹಿರಿಯ ಲೇಖಕ ಬಾಳಿಕೆ ಟಿ.ಕೆ ಆಳ್ವ ನಿಧನ


ಮಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ವಿಭಾಗದ ನಿವೃತ್ತ ಅಧಿಕಾರಿ, ಪ್ರತಿಷ್ಠಿತ ತಲೇಕಳ ಕುಟುಂಬದ ಯಜಮಾನ, ಹಿರಿಯ ಲೇಖಕ ಕಂದಾವರ ಬಾಳಿಕೆ ಟಿ.ಕೆ.ಆಳ್ವರು ಇಂದು ಮುಂಜಾನೆ ಮೈಸೂರಿನ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.


ಬಂಟರ ಮಾತೃ ಸಂಘದ ಸಂಪರ್ಕ ಪತ್ರಿಕೆಯಲ್ಲಿ ಅವರ ಹಲವು ಲೇಖನಗಳು ಪ್ರಕಟವಾಗಿವೆ. ಧರ್ಮಪತ್ನಿ, ಲೇಖಕಿ ಜಾಹ್ನವಿ ಟಿ.ಕೆ.ಆಳ್ವ; ಈರ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ತಲೇಕಳ ಕಿಂಞಣ್ಣ ಆಳ್ವರ ಮಹತ್ವಾಕಾಂಕ್ಷೆಯ 'ಕಂದಾವರದ ಕಂದೀಲು' ಪುಸ್ತಕ ಮುದ್ರಣವಾಗಿದ್ದು ಅದರ ಬಿಡುಗಡೆಗೆ ಮುನ್ನವೇ ಅವರು ವಿಧಿವಶರಾಗಿರುವುದು ವಿಷಾದನೀಯ. ಅವರ ದಿವ್ಯಾತ್ಮಕ್ಕೆ ದೇವರು ಸಾಯುಜ್ಯ ಕರುಣಿಸಲಿ ಎಂದು 'ಯಕ್ಷಾಂಗಣ'ದ ಅಧ್ಯಕ್ಷರಾದ ಭಾಸ್ಕರ ರೈ ಕುಕ್ಕುವಳ್ಳಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post