ಬೆಂಗಳೂರು: ರೇಡಿಯೋ ಜಾಕಿಯಾಗಿ ಮಾತಿನ ಮೂಲಕ ಜನತೆಯ ಮನ ಗೆದ್ದಿದ್ದ ರೇಡಿಯೋ ಜಾಕಿ ಆರ್.ಜೆ ರಚನಾ ಹೃದಯಾಘಾತದಿಂದ ನಿಧನರಾಗಿದ್ದಾರೆ.
ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ಆರ್ ಜೆ ರಚನಾ (39), ಕಳೆದ 7 ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಏಕಾಂಗಿಯಾಗಿದ್ದರು.
ಹೀಗೆ ಒಬ್ಬಂಟಿಯಾಗಿದ್ದ ಅವರು, ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಇದೇ ಕಾರಣ ಇಂದು ಹೃದಯಾಘಾತ ಸಂಭವಿಸಿ ನಿಧನರಾದರು.
ರೇಡಿಯೋ ಜಾಕಿ ರಚನಾ ರೇಡಿಯೋ ಮಿರ್ಚಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಪಟ್ ಪಟ್ ಮಾತಿನ ಮೂಲಕ ಅನೇಕ ಕೇಳುಗರನ್ನು ಸೆರೆಹಿಡಿದಿದ್ದರು.
ಹೀಗೆ ಕೆಲಸ ಮಾಡಿ ಕೆಲಸ ಬಿಟ್ಟು ಮನೆಯಲ್ಲಿದ್ದ ಅವರು ಡಿಪ್ರೆಷನ್ ಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾದ ಕಾರಣ, ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
Post a Comment