ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿನ್ನದ ಗಣಿಯಲ್ಲಿ ಕಲ್ಲು ಬಿದ್ದು ವ್ಯಕ್ತಿ ಸಾವು,ಇಬ್ಬರಿಗೆ ಗಾಯ

ಚಿನ್ನದ ಗಣಿಯಲ್ಲಿ ಕಲ್ಲು ಬಿದ್ದು ವ್ಯಕ್ತಿ ಸಾವು,ಇಬ್ಬರಿಗೆ ಗಾಯ

 


ರಾಯಚೂರು: ಹಟ್ಟಿ ಚಿನ್ನದ ಗಣಿ ಕಂಪನಿ ವ್ಯಾಪ್ತಿಯ ಊಟಿ ಗೋಲ್ಡ್ ಮೈನ್ಸ್‌ನಲ್ಲಿ ನಿನ್ನೆ ರಾತ್ರಿ ಮೇಲ್ಭಾಗದ ಕಲ್ಲು ಬಿದ್ದು ಸ್ಥಳದಲ್ಲೇ ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆಯೊಂದು ವರದಿಯಾಗಿದೆ.

ಇದೇ ವೇಳೆ, ಇಬ್ಬರು ಗಾಯಗೊಂಡಿದ್ದಾರೆ. ಮೃತಪಟ್ಟ ಕಾರ್ಮಿಕನನ್ನು ಯಲ್ಲಪ್ಪ ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ಪಾಳೆಯದ ಕಾರ್ಮಿಕರು 700ರಿಂದ 800 ಅಡಿ ಆಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಮೇಲ್ಭಾಗದ ಕಲ್ಲು ಸಡಿಲಗೊಂಡು ಕಾರ್ಮಿಕರ ಮೇಲೆಯೇ ಉರುಳಿದೆ.

ಗಾಯಾಳುಗಳನ್ನು ಹಟ್ಟಿ ಚಿನ್ನದ ಗಣಿ ಕಂಪನಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


0 Comments

Post a Comment

Post a Comment (0)

Previous Post Next Post