ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ರತ್ಯೇಕತೆಯ ವಿಷ ಬಿತ್ತುವವರ ಹುಟ್ಟಡಗಿಸಲು ಸಮಾನ ನಾಗರಿಕ ಸಂಹಿತೆ ತುರ್ತಾಗಿ ಜಾರಿಯಾಗಲಿ

ಪ್ರತ್ಯೇಕತೆಯ ವಿಷ ಬಿತ್ತುವವರ ಹುಟ್ಟಡಗಿಸಲು ಸಮಾನ ನಾಗರಿಕ ಸಂಹಿತೆ ತುರ್ತಾಗಿ ಜಾರಿಯಾಗಲಿ


 

ರಾಜ್ಯ ರಾಷ್ಟ್ರ ವ್ಯಾಪಿಯಾಗಿ ನಡೆಯುತ್ತಿರುವ ಕೆಲವೊಂದು ವಿದ್ಯಮಾನಗಳನ್ನು ನೇೂಡಿದರೆ ಕೇರಳದ ರಾಜ್ಯಪಾಲರಾದ ಆರೀಫ್ ಮಹಮ್ಮದ್ ಖಾನ್ ಪ್ರಸ್ತಾಪಿರುವ ಸಮಾನ ನಾಗರಿಕ ಕಾನೂನು ಇಂದಿನ ಅಗತ್ಯತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಇದಾಗಲೇ ಹಲವು ನ್ಯಾಯಾಲಯಗಳು ಕೂಡಾ ಹಸಿರು ನಿಶಾನೆ ತೇೂರಿಸಿವೆ. ಹಾಗಾಗಿ ಪ್ರಸ್ತುತ ಕೇಂದ್ರ ಸರಕಾರ ಶೀಘ್ರವಾಗಿ ಈ ಕುರಿತಾಗಿ ಒಂದು ದಿಟ್ಟ ಹೆಜ್ಜೆ ಇಡಬೇಕಾದ ಸನ್ನಿವೇಶ ರಾಷ್ಟ್ರದಲ್ಲಿ ಸೃಷ್ಟಿಯಾಗಿದೆ. ಅದರಲ್ಲೂ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ.


ಇತ್ತೀಚಿನ ದಿನಗಳಲ್ಲಿ ಜಾತಿ ಧಮ೯ಗಳ ವೈಯಕ್ತಿಕ ಹಕ್ಕು ನಂಬಿಕೆ ಆಚರಣೆಗಳನ್ನೆ ತಮ್ಮ ಮೂಲಭೂತ ಹಕ್ಕು ಅದಕ್ಕೂ ಸರಕಾರಿ ಸಂಸ್ಥೆಗಳಲ್ಲಿ ಪ್ರತೇಕ ಸ್ಥಾನಮಾನ ನೀಡಬೇಕು ಅಂದು ವಾದಿಸುವಷ್ಟು ನಮ್ಮ ಜನ ಮುಂದುವರಿದಿದ್ದಾರೆ.ಅಂದರೆ ಅವರಿಗೆ ರಾಷ್ಟ್ರದ ಸಂವಿಧಾನ ನ್ಯಾಯಾಂಗ ಕಾನೂನು ಮುಖ್ಯವಲ್ಲ, ಬದಲಾಗಿ ಸಾರ್ವಜನಿಕವಾಗಿ ಅಸಮಾನತೆ ಸಮಸ್ಯೆ ಸೃಷ್ಟಿಸುವ ಉಡುಗೆ ತೊಡುಗೆ; ಆಹಾರ ವಿಹಾರ; ಆಚಾರಗಳೇ ವಿಚಾರಗಳೇ ಮುಖ್ಯ ಹೊರತು ಸಮಾನತೆ ಏಕತೆ ಶಿಕ್ಷಣ ಬೆಳವಣಿಗೆ ಮುಖ್ಯವಲ್ಲ ಅನ್ನುವಷ್ಟು ಮೂಢತೆ ತುಂಬಿ ಹೇೂಗಿದೆ.


ಅದು ಸಂಸತ್ತು ಇರಬಹುದು, ಅಸೆಂಬ್ಲಿ ಇರಲಿ ಅಲ್ಲಿ ಒಂದು ವಸ್ತೃ ಸಂಹಿತೆ ಶಿಸ್ತು ಕಾಪಾಡಬೇಕು ಅನ್ನುವಷ್ಟು ಸಾಮಾನ್ಯ ಪ್ರಜ್ಞೆ ಇಲ್ಲ. ಸಂವಿಧಾನದ ಮೂಲಭೂತ ಕರ್ತವ್ಯಗಳಿಗೂ ಚ್ಯುತಿ ಬರಬಾರದು ಅನ್ನುವ ಪರಿಜ್ಞಾನವೂ ಇಲ್ಲದ ಜನಪ್ರತಿನಿಧಿಗಳು ಆಯ್ಕೆಯಾಗುತ್ತಿರುವುದು ಇನ್ನೊಂದು ದುರಂತ. ರಾಷ್ಟ್ರದ ಸಾಮಾಜಿಕ ಆಥಿ೯ಕ ರಾಜಕೀಯ ಸಾರ್ವಜನಿಕ ಬದುಕಿನಲ್ಲಿ ಕಾನೂನಿನ ಎದುರು ಎಲ್ಲರೂ ಸಮಾನರಾಗಿ ಬದುಕನ್ನು ನಡೆಸುವ ಸಮಾನ ನಾಗರಿಕ ಸಂಹಿತೆ ಅನುಷ್ಠಾನಗೊಳ್ಳಲೇಬೇಕು.


ನಮ್ಮ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದರೆ ಶಾಲೆ ಒಂದರಲ್ಲಿಯೇ ಜಾತಿ ಧರ್ಮ ಸಾಮಾಜಿಕ ಆರ್ಥಿಕ  ಅಸಮಾನತೆಯ ವಿಷ ಬೀಜ ಬಿತ್ತುವ ಧಾರ್ಮಿಕ ನಂಬಿಕೆಗಳನ್ನೆ ನಮ್ಮ ಮೂಲಭೂತ ಹಕ್ಕು ಎಂದು ಪ್ರತಿ ಪಾದಿಸುವಷ್ಟು ಸಂವಿಧಾನವನ್ನು ಎತ್ತಿ ಹಿಡಿದು ತೇೂರಿಸುತ್ತಿದ್ದೇವೆ.


ನಮ್ಮದು ಭಾರತೀಯ ಸಂವಿಧಾನವೇ ಹೊರತು ಕಾಂಗ್ರೆಸ್ ಕಮ್ಯುನಿಸ್ಟ್ ಬಿಜೆಪಿ ಪರವಾದಿಸುವ ಸಂವಿಧಾನವಲ್ಲ. ಇಂದು ರಾಜಕೀಯ ಪಕ್ಷಗಳ ರಾಜಾಶ್ರಯದಲ್ಲಿ ಹುಟ್ಟಿ ಕೊಂಡ ನ್ಯಾಯಾಂಗ ಸಂವಿಧಾನ ಪರಿಣಿತರು ಸಂವಿಧಾನವನ್ನೇ ತಮ್ಮ ಪಕ್ಷದ ಕಡೆಗೆ ಹೆೈಜಾಕ್ ಮಾಡುವ ವಕೀಲರಿಗೇನು ಕಡಿಮೆ ಇಲ್ಲ!


ಸಮಾನ ನಾಗರಿಕ ಸಂಹಿತೆಗೊಂದು ಸ್ವಷ್ಟ ರೂಪ ಕಲ್ಪಿಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ಹಿಜಾಬ್ ನಂತಹ ಒಂದು ಸಣ್ಣ ವಿಚಾರವೇ ಉಡುಪಿಯ ಮೂಲೆಯಲ್ಲಿ ಹುಟ್ಟಿ ರಾಷ್ಟ್ರ ಅಂತಾರಾಷ್ಟೀಯ ಸುದ್ದಿ ಯಾಗಿ ಚಚೆ೯ಯಾಗಿ ಬಂದಿದೆ ಅಂದರೆ ಇನ್ನೂ ಸಮಾನ ನಾಗರಿಕ ಕಾನೂನಿಗೆ ಎಷ್ಟೊಂದು ಧ್ವನಿ ಪ್ರತಿ ಧ್ವನಿ ಬರಲಿಕ್ಕಿಲ್ಲ. ಸಂವಿಧಾನದ ರಾಜ್ಯ ನಿರ್ದೇಶಿತ ತತ್ವಗಳಲ್ಲಿ ಸ್ವಷ್ಟವಾಗಿ ಹೇಳಿದೆ; ಸಮಾನ ನಾಗರಿಕ ಸಂಹಿತೆ ಅನುಷ್ಠಾನಗೊಳಿಸ ಬೇಕೆಂಬ ನಿರ್ದೇಶನ ಕೊಟ್ಟಿದೆ. ಆದರೆ ಇದನ್ನು ಅನುಷ್ಠಾನಗೊಳಿಸುವ ರಾಜಕೀಯ ಇಚ್ಛಾ ಶಕ್ತಿಯನ್ನು ಯಾರು ಕೂಡಾ ಪ್ರದರ್ಶಿಸಲೇ ಇಲ್ಲ. ಕಾರಣ ವೇೂಟ್ ಬ್ಯಾಂಕ್ ರಾಜಕೀಯ. ಆದರೂ ಇಂದಿನ ಕೇಂದ್ರ ಸರಕಾರದಿಂದ ಮಾತ್ರ ಇದು ಸಾಧ್ಯ ಅನ್ನುವ ಜನರ ನಿರೀಕ್ಷೆಯೂ ಇದೆ. ಕಾದು ನೇೂಡೇೂಣ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post