ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ಳಾರೆ ಘಟಕದ ಹಿರಿಯ ಗೃಹರಕ್ಷಕರಿಗೆ ಸನ್ಮಾನ

ಬೆಳ್ಳಾರೆ ಘಟಕದ ಹಿರಿಯ ಗೃಹರಕ್ಷಕರಿಗೆ ಸನ್ಮಾನ


ಬೆಳ್ಳಾರೆ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಬೆಳ್ಳಾರೆ ಘಟಕದ ಹಿರಿಯ ಗೃಹರಕ್ಷಕರಿಗೆ ದಿನಾಂಕ 20-02-2022ನೇ ಭಾನುವಾರದಂದು ಸನ್ಮಾನ ಕಾರ್ಯಕ್ರಮವು ಬೆಳ್ಳಾರೆ ಗೃಹರಕ್ಷಕದಳ ಘಟಕ ಕಛೇರಿಯಲ್ಲಿ ನಡೆಯಿತು.


ಪ್ರಭಾಕರ್ ಮೆಟಲ್ ಸಂಖ್ಯೆ 708, ಇವರು 1993ರಲ್ಲಿ ಗೃಹರಕ್ಷಕದಳ ಸದಸ್ಯರಾಗಿ ಸೇರ್ಪಡೆಯಾಗಿ, 29 ವರ್ಷಗಳಿಂದ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತ ಬಂದಿರುತ್ತಾರೆ. ರಾಮಚಂದ್ರ, ಮೆಟಲ್ ಸಂಖ್ಯೆ 718, ಇವರು 2000 ರಲ್ಲಿ ಗೃಹರಕ್ಷಕದಳ ಸದಸ್ಯನಾಗಿ ಸೇರ್ಪಡೆಯಾಗಿ 22 ವರ್ಷಗಳಿಂದ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ನಾರಾಯಣ ಮಣಿಯಾಣಿ, ಮೆಟಲ್ ಸಂಖ್ಯೆ 717, ಇವರು 2008 ರಲ್ಲಿ ಗೃಹರಕ್ಷಕದಳ ಸದಸ್ಯನಾಗಿ ಸೇರ್ಪಡೆಯಾಗಿ, 14 ವರ್ಷಗಳಿಂದ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ.




ಇವರುಗಳು ದಕ್ಷ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದು, ಬೆಳ್ಳಾರೆ ಗೃಹರಕ್ಷಕದಳದ ಸದಸ್ಯರಾಗಿರುತ್ತಾರೆ. ಅವರ ಸೇವೆಯನ್ನು ಗುರುತಿಸಿ, ಗೌರವಿಸಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂOತಾರು ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಬೆಳ್ಳಾರೆ ಘಟಕದ ಪ್ರಭಾರ ಘಟಕಧಿಕಾರಿ ವಸಂತ ಕುಮಾರ್, ಹಿರಿಯ ಗೃಹರಕ್ಷಕರಾದ ಸೀತಾರಾಮ್, ಅಣ್ಣು, ವೀರನಾಥ, ಪದ್ಮನಾಭ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post