ಹುಬ್ಬಳ್ಳಿ: ಧಾರವಾಡದ ಕೆಸಿಡಿ ಕಾಲೇಜು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಈರಣ್ಣ ಪಾಟೀಲ್, ನವೀನ್, ಅಭಿರಾಮ್, ಚಿದಾನಂದ ಸೇರಿ ಐವರನ್ನು ಬಂಧಿಸಿದ್ದಾರೆ.
ನಿನ್ನೆ ಧಾರವಾಡದ ದಾನುನಗರದಲ್ಲಿ ಭರತ್ ಎಂಬ ಕೆಸಿಡಿ ಸಿಬ್ಬಂದಿ ಮೇಲೆ ರೌಡಿಶೀಟರ್ ಹಾಗೂ ಆತನ ಸಂಗಡಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಈ ಬಗ್ಗೆ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ವಿಚಾರಣೆಗೊಳಪಡಿಸಿದ್ದಾರೆ.
Post a Comment