ಒಡಿಯೂರು: ಕವಿ, ಸಾಹಿತಿ, ವಿದ್ವಾಂಸ ಮತ್ತು ಮಾಧ್ಯಮತಜ್ಞ ಡಾ. ವಸಂತಕುಮಾರ ಪೆರ್ಲ ಅವರಿಗೆ ಒಡಿಯೂರಿನ ಶ್ರೀ ಗುರು ದೇವಾನಂದ ಸ್ವಾಮೀಜಿಯವರ ಷಷ್ಟ್ಯಬ್ದಿ ಸಮಾರಂಭದ ಸಮಾರೋಪ ಹಾಗೂ ಒಡಿಯೂರು ಜಾತ್ರೆಯ ಸಂದರ್ಭದ ವಿಶೇಷ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗಳು ಶಾಲು ಫಲಪುಷ್ಪ ಸ್ಮರಣಿಕೆ ಸನ್ಮಾನಪತ್ರಗಳನ್ನು ಸಮರ್ಪಿಸಿ 'ಒಡಿಯೂರುಶ್ರೀ' ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಿದರು.
ಸಾಹಿತ್ಯ, ಮಾಧ್ಯಮ, ರಂಗಭೂಮಿ, ಸಂಘಟನೆ, ಸಮಾಜಸೇವೆ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಡಾ. ಪೆರ್ಲ ಅವರು ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಈ ಸನ್ಮಾನ ಮಾಡಲಾಯಿತು.
ಸಾಧ್ವಿ ಮಾತಾನಂದಮಯಿ, ಮೂಡಬಿದಿರೆಯ ಡಾ. ಎಂ. ಮೋಹನ ಆಳ್ವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಸುಬ್ರಾಯ ಪೈ ವಿಟ್ಲ , ಬ್ಯಾಂಕ್ ಆಫ್ ಬರೋಡಾ ಜನರಲ್ ಮ್ಯಾನೇಜರ್ ಗಾಯತ್ರಿ ರವಿಚಂದ್ರನ್ ಮೊದಲಾದ ಗಣ್ಯರು ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.
ಒಡಿಯೂರು ಶ್ರೀಗಳ ಅರವತ್ತನೇ ಹುಟ್ಟುಹಬ್ಬದ ಪ್ರಯುಕ್ತ ಒಟ್ಟು ಎಂಬತ್ತೇಳು ಮಂದಿ ವಿವಿಧ ಕ್ಷೇತ್ರಗಳ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment