ಮಂಗಳೂರು: "ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಾಹಿತಿ, ಸಮಾಜ ಸೇವಕಿ, ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ಬೆಂಗಳೂರಿನ ಜನತಾ ಸಮಾಜ ಸೇವಾ ಟ್ರಸ್ಟ್ (ರಿ) ಡಾ. ಶಿವಕುಮಾರ ಮಹಾಸ್ವಾಮೀಜಿಯವರ ಪುಣ್ಯ ಸ್ಮರಣಾರ್ಥ ಕಾರ್ಯಕ್ರಮದ ಅಂಗವಾಗಿ ನೀಡುವ "ಸಿಧ್ದಗಂಗಾ ಶ್ರೀ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 13ರಂದು ಬೆಂಗಳೂರಿನಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.
ಡಾ ಮಾಲತಿ ಶೆಟ್ಟಿ ಮಾಣೂರು ಈಗಾಗಲೇ 9 ಕೃತಿಗಳನ್ನು ಬರೆದಿದ್ದಾರೆ 9 ವರುಷದಿಂದ ಸಾಹಿತ್ಯಪರ, ಸದಭಿರುಚಿಯ ಅಮೃತ ಪ್ರಕಾಶ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪತ್ರಿಕೆ ವತಿಯಿಂದ 35 ಕೃತಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಇವರಿಗೆ ಈಗಾಗಲೇ 6 ರಾಜ್ಯ ಪ್ರಶಸ್ತಿ, 4 ರಾಷ್ಟ್ರೀಯ ಪ್ರಶಸ್ತಿ, ಪ್ರಾಪ್ತವಾಗಿದೆ. 2018ರಲ್ಲಿ ಗೌರವ ಡಾಕ್ಟರೇಟ್ ಚೆನ್ನೈನಲ್ಲಿ ನೀಡಿ ಗೌರವಿಸಲಾಗಿದೆ.
ಕಳೆದ 16 ವರ್ಷಗಳಿಂದ ಸಾಹಿತ್ಯ ಪತ್ರಿಕೋದ್ಯಮ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಹಿರಿಯ ಯಕ್ಷಗಾನ ಕಲಾವಿದ ಮಾಣೂರಿನ ಕಿಟ್ಟಣ ಶೆಟ್ಟಿ ಮಾಣೂರು ಹಾಗೂ ರೇವತಿ ಶೆಟ್ಟಿ ಮಾಣೂರು ದಂಪತಿಗಳ ಸುಪುತ್ರಿ. ಪ್ರಸ್ತುತ ಮಂಗಳೂರಿನ ಅತ್ತಾವರದ ವೈದ್ಯನಾಥ ನಗರ ಸಾಹಿತ್ಯ ನಂದನದಲ್ಲಿ ಪತಿ ಸತ್ಯಪ್ರಕಾಶ್ ಶೆಟ್ಟಿ ಅವರೊಂದಿಗೆ ವಾಸವಾಗಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment