ಹುಬ್ಬಳ್ಳಿ: ಆಸ್ತಿ ವಿಚಾರವಾಗಿ 7 ಜನರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆಯೊಂದು ಧಾರವಾಡ ಜಿಲ್ಲೆಯ ಮುರುಘಾಮಠದ ಬಳಿ ನಡೆದಿದೆ.
ಸುರೇಶ ಹೊಸೂರ ಹಲ್ಲೆಗೊಳಗಾದ ಯುವಕ. ಆಸ್ತಿ ವಿಚಾರಕ್ಕಾಗಿ ಪ್ರಕಾಶ ಹೊಸೂರ ಮತ್ತು ವಿನಯ ಹೊಸೂರ ಎಬವರು ಗುಂಪು ಕಟ್ಟಿಕೊಂಡು ಸುರೇಶ್ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ.
ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment