ಬಂಟ್ವಾಳ: ಮುಸ್ಲಿಂ ಮದುವೆಯ ಸಂಭ್ರಮದಲ್ಲಿ ಮದುಮಗನೊಬ್ಬ ಕೊರಗಜ್ಜನ ರೀತಿ ವೇಷ ತೊಟ್ಟು ಕುಣಿದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತುಳುನಾಡಿನ ಜನರು ಭಕ್ತಿಯಿಂದ ಆರಾಧಿಸಿಕೊಂಡು ಬರುವ ಕಾರಣಿಕದ ದೈವವಾದ ಕೊರಗಜ್ಜನನ್ನು ಅವಮಾನಿಸುವ ರೀತಿಯಲ್ಲಿ ಅನ್ಯ ಸಮುದಾಯದ ವ್ಯಕ್ತಿ ನಡೆದುಕೊಂಡಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಈ ಘಟನೆಯ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಸಾರ್ವಜನಿಕರ ಗಮನಕ್ಕೆ ಇದು ಬಂದಿದೆ. ವಿವಿಧ ಹಿಂದೂ ಸಂಘಟನೆಗಳು ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿವೆ.
ಕೊಳ್ನಾಡು ಗ್ರಾಮದ ಅಜೀಝ್ ಎಂಬವರ ಮಗಳ ಮದುವೆಯಲ್ಲಿ ಈ ಘಟನೆ ನಡೆದಿದೆ. ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಜತೆ ಅಜೀಝ್ ಪುತ್ರಿಯ ವಿವಾಹ ಅಂದು ಮಧ್ಯಾಹ್ನ ನಡೆದಿತ್ತು. ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ ಆಗಮಿಸಿದ್ದಾನೆ. ತಡರಾತ್ರಿ ಆಗಮಿಸಿದ್ದ ಯುವಕರ ಗುಂಪು ವರನನ್ನು ವಿಶೇಷವಾಗಿ ಸಿಂಗರಿಸಿತ್ತು.
ತಲೆಗೆ ಹಾಳೆಯ ಟೊಪ್ಪಿ ಧರಿಸಿ, ಮುಖಕ್ಕೆ ಮಸಿ ಹಾಕಿಕೊಂಡು ವಧುವಿನ ಮನೆಯ ರಸ್ತೆ ಮುಂದೆ ಕುಣಿದಾಡಿದ್ದಾನೆ. ಕೊರಗಜ್ಜನನ್ನು ಹೋಲುವಂತೆ ಮಸಿ ಬಳಿದುಕೊಂಡು ವೇಷ ಧರಿಸಿದ್ದು ಕೊರಗಜ್ಜ ದೈವಕ್ಕೆ ಹಾಗೂ ಕೊರಗ ಸಮುದಾಯವನ್ನು ಅಣಕಿಸಿದಂತಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಹಿಂದೆಯೂ ಹಲವು ಬಾರಿ ಕೊರಗಜ್ಜ ಹಾಗೂ ಇತರ ದೈವಗಳ ದೈವಸ್ಥಾನಗಳ ಕಾಣಿಕೆ ಡಬ್ಬಿಗಳಲ್ಲಿ ನಿಷಿದ್ಧ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸಿದ ಪ್ರಕರಣಗಳು ನಡೆದಿದ್ದವು. ಈ ಪ್ರಕರಣಗಳಲ್ಲಿ ಕೆಲವರ ಬಂಧನವೂ ನಡೆದಿತ್ತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment