ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಾರಾಂತ್ಯ ಕರ್ಫ್ಯೂ: ಪುತ್ತೂರು ನಗರ, ಗ್ರಾಮಾಂತರಗಳಲ್ಲಿ ಉತ್ತಮ ಸ್ಪಂದನೆ

ವಾರಾಂತ್ಯ ಕರ್ಫ್ಯೂ: ಪುತ್ತೂರು ನಗರ, ಗ್ರಾಮಾಂತರಗಳಲ್ಲಿ ಉತ್ತಮ ಸ್ಪಂದನೆ


ಪುತ್ತೂರು: ಓಮಿಕ್ರಾನ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರಕಾರ ಜಾರಿಗೊಳಿಸಿದ ವಾರಂತ್ಯ  ಕರ್ಫ್ಯೂವಿಗೆ ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.


ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳನ್ನು ಹೊರತುಪಡಿಸಿ ಉಳಿದವು ಬಾಗಿಲು ತೆರೆಯಲಿಲ್ಲ. ಸಾರ್ವಜನಿಕ ಓಡಾಟವು ಕಡಿಮೆಯಾಗಿತ್ತು.


ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಸುಳ್ಯ, ಮಂಗಳೂರು ಸೇರಿದಂತೆ ವಿರಳ ಸಂಖ್ಯೆಯ ಬಸುಗಳು ಓಡಾಟ ನಡೆಸಿದವು. ಗ್ರಾಮಾಂತರಕ್ಕೆ ಅತಿ ವಿರಳ ಓಡಾಟವಿತ್ತು. ಕೆಲವು ಖಾಸಗಿ ಬಸ್ಸುಗಳು ಸಂಚಾರಿಸಿದವು. ಆಟೋರಿಕ್ಷಗಳ ಓಡಾಟವು ಕಂಡುಬಂತು. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.


ಶಾಲಾ -ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಸರಕಾರಿ ಕಚೇರಿಗಳು ಕಾರ್ಯನಿರ್ವಾಹಿಸಲಿಲ್ಲ. ಎರಡನೇ ಶನಿವಾರವಾದ ಕಾರಣ ಬ್ಯಾಂಕ್, ಸೊಸೈಟಿಗಳಿಗೂ ರಜೆ ಇತ್ತು.


ಸಾರ್ವಜನಿಕ ಅಗತ್ಯದ ಸರಕಾರಿ, ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಎಂದಿನಂತೆ ಕಾರ್ಯನಿರ್ವಹಿಸಿದವು.


ಸೀಮಿತ ಜನರ ಪಾಲ್ಗೊಳ್ಳಯುವಿಕೆಯಲ್ಲಿ ಅಲ್ಲಲ್ಲಿ ಪೂರ್ವನಿಗದಿತ ಖಾಸಗಿ ಕಾರ್ಯಕ್ರಮಗಳು ನಡೆದಿರುವುದು ಕಂಡುಬಂತು. ಮದುವೆ ಸೇರಿದಂತೆ ಶುಭ ಸಮಾರಂಭಗಳು ಬಹುತೇಕ ಮನೆ ಕಾರ್ಯಕ್ರಮಗಳಾಗಿ ಬದಲಾವಣೆಗೊಂಡಿವೆ.

ಪೊಲೀಸ್ ಕ್ರಮ ಇಲ್ಲ:

ಈ ಹಿಂದಿನ ಲಾಕ್ ಡೌನಗಳಂತೆ ಪೊಲೀಸ್ ಉಪಸ್ಥಿತಿಯ ನಿರ್ಬಂಧಗಳು ಈ ಬಾರಿ  ಕಂಡು ಬಂದಿಲ್ಲ. ಹೆದ್ದಾರಿಗಳಲ್ಲಿ ಕೆಲವು ಕಡೆ ಮಾತ್ರ ಪೊಲೀಸ್ ತಪಾಸಣೆ ಇತ್ತು. ಸಾರ್ವಜನಿಕ ಸ್ವ ಶಿಸ್ತಿಗೆ ಬಿಡಲಾಗಿತ್ತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post