ಕುರುಗೋಡು: ಕೃಷಿ ಕೆಲಸಕ್ಕಾಗಿ ತೆರಳಿದ್ದ ಯುವಕರು ಸಂಜೆ ವೇಳೆಗೆ ಒಂದೇ ಬೈಕ್ ನಲ್ಲಿ ಮರಳುತ್ತಿದ್ದ ಮೂವರು ಯುವಕರು ಟ್ರಾಕ್ಟರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು ಮಂಗಳವಾರ ಸಂಜೆ ನಡೆದಿದೆ.
ಮೃತ ದುರ್ದೈವಿಗಳು ಬಾದನಹಟ್ಟಿ ಗ್ರಾಮದ ಕರಿಬಸಪ್ಪ (25), ದೊಡ್ಡಬಸಪ್ಪ (27), ಗೊಲ್ಲರ ಗೋಪಾಲ (28) ಎಂದು ತಿಳಿದು ಬಂದಿದೆ.
ಬಾದನಹಟ್ಟಿ ಗ್ರಾಮದಿಂದ ಸಿದ್ದಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ಹೊರ ರಸ್ತೆ ಯಲ್ಲಿ ಗೊಲ್ಲರ ಗೋಪಾಲ ಅವರ ಗದ್ದೆ ಕೆಲಸಕ್ಕೆ ಹೋಗಿ ಸಂಜೆ ಮರಳಿ ಬರುವ ಸಂದರ್ಭದಲ್ಲಿ ರಸ್ತೆ ಯಲ್ಲಿ ಕುರುಗೋಡು ನಿವಾಸಿ ಬಸವರಾಜ್ ಅವರು ಯಾವುದೇ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸದೆ ಟ್ರಾಕ್ಟರ್ ನಿಲ್ಲಿಸಿದ್ದರಿಂದ ಅದಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment