ಪುತ್ತೂರು: ತನುಶ್ರೀ ಪ್ರೊಡಕ್ಷನ್ ಬೆಂಗಳೂರು ಅರ್ಪಿಸುವ, ಹರೀಶ್ ಪುತ್ತೂರು ನಿರ್ದೇಶನ ಹಾಗೂ ಛಾಯಾಗ್ರಾಹಣ ಮಾಡಿರುವ 'ಪಂಚನಕ್ಷತ್ರ' ಕಿರುಚಿತ್ರವು ಬಿಡುಗಡೆಗೊಳ್ಳಲಿದೆ.
ಸಮಾಜದಲ್ಲಿ ಹೆಣ್ಣಿನ ಸ್ಥಿತಿ ಗತಿ, ಗೌರವ, ಸ್ಥಾನಮಾನ ಹಾಗೂ ಒಂದು ಹೆಣ್ಣಿಗೆ ಯಾವ ರೀತಿ ಗೌರವ ಸಮಾಜದಲ್ಲಿ ದೊರಕುತ್ತಿದೆ ಎನ್ನುವುದನ್ನು ವ್ಯಕ್ತಪಡಿಸಿರುವ ಈ ಕಿರು ಚಿತ್ರ ಈಗಾಗಲೇ ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲಿ ತೆರೆಕಾಣಲಿದೆ.
ಹರೀಶ್ ಪುತ್ತೂರು ಇವರು ಛಾಯಾಗ್ರಾಹಕದಲ್ಲಿ ತೊಡಗಿರುವ 'ಧರ್ಮದೈವ' ಮತ್ತು 'ವಿಷಾಮೃತ' ಮೊದಲಾದ ಕಿರುಚಿತ್ರಗಳಿಗೆ ಛಾಯಾಗ್ರಾಹಣ ಮಾಡಿದ್ದು, 'ಧರ್ಮದೈವ' ತುಳುನಾಡ ಬೊಲ್ಪು ಎಂಬ ಕಿರುಚಿತ್ರವು 17 ಲಕ್ಷಕ್ಕೂ ಮಿಕ್ಕ ಜನರು ವೀಕ್ಷಿಸಿದ್ದು, ಜನರ ಮನ ಸೆಳೆದಿರುವುದು ಅತ್ಯಂತ ಹೆಮ್ಮೆಯ ವಿಚಾರ ಹಾಗೂ ಸಂತೋಷದ ಸಂಗತಿ ಎಂದು ಹೇಳಬಹುದಾದ ಕಿರುಚಿತ್ರ. ಆ ಕಿರುಚಿತ್ರದ ಬಳಿಕ ಮೊದಲಾಗಿ ನಿರ್ದೇಶಕರಾಗಿ ಹೆಜ್ಜೆ ಇಟ್ಟ ಕಿರುಚಿತ್ರವೇ 'ಪಂಚನಕ್ಷತ್ರ'. ತಂದೆ ತಾಯಿಯ ಆಶೀರ್ವಾದದಿಂದ ಬೆಳೆದು ಬಂದ ಇವರಿಗೆ ಪ್ರತಿಯೊಂದು ಕೆಲಸದಲ್ಲೂ ತಂದೆ ತಾಯಿಯ ಪ್ರೋತ್ಸಾಹ, ಬೆಂಬಲವೇ ಆಧಾರವಾಗಿದೆ. ಸುಂದರ ರೈ ಅವರ ಪ್ರೇರಣೆಯಿಂದ ಕಲಾ ರಂಗಕ್ಕೆ ಕಾಲಿಟ್ಟು, ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ.
ಹರೀಶ್ ಪುತ್ತೂರು ನಿರ್ದೇಶಿಸಿರುವ ಕಿರುಚಿತ್ರದಲ್ಲಿ ಛಾಯಾಗ್ರಹಣ ಹಾಗೂ ಸಂಕಲನ ಸಹ ಇವರೇ ಮಾಡಿದ್ದು, ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಉಷಾ ಬೆಂಗಳೂರು ಮಾಡಿದ್ದಾರೆ. ಈ ಕಿರುಚಿತ್ರದಲ್ಲಿ ಪ್ರಧಾನ ಪಾತ್ರವಾಗಿ ಉಷಾ ನಟಿಸಿದ್ದು, ದ್ರುವಗೌಡ, ತನುಶ್ರೀ, ಜೆ.ಚೇತನಾ, ಸೌಮ್ಯ, ವರಲಕ್ಷ್ಮಿ (ವಿಷ್ಣುಪ್ರಿಯೇ), ಸುಕನ್ಯಾ (ವಿಷ್ಣುಪ್ರಿಯೇ), ವೆಂಕಟೇಶ್, ಅಲೆಕ್ಸ್ (ಕೋತಿ), ನರೇಶ್ (ಜಾಕ್ ), ಲೋಕಾರ್ಜುನ (ಅರ್ಜುನ ), ಮೇಘನಾ, ಪಲ್ಲವಿ ಜೆ, ಚಂದ್ರಿಕಾ ಆರ್, ಸರಸು ಗೌಡ, ಕಿಶೋರ್, ರಮೇಶ್ ಹಾಗೂ ಮೊದಲಾದ ಕಲಾವಿದರು ನಟಿಸಿದ್ದಾರೆ.
ಸಮಾಜದಲ್ಲಿ ಒಂದು ಹೆಣ್ಣಿನ ಪಾತ್ರವು ಬಹಳ ಮುಖ್ಯ ಪಾತ್ರವಾಗಿದೆ. ಆಕೆಯ ಜೀವನದ ಸಮಸ್ಯೆಗಳನ್ನು ಎದುರಿಸಿ, ಜೀವನವನ್ನು ಯಾವ ರೀತಿ ನಡೆಸುತ್ತಾಳೆ ಎನ್ನುವುದಕ್ಕೆ ಮಾದರಿಯಾದ 'ಪಂಚನಕ್ಷತ್ರ' ಕಿರುಚಿತ್ರವು ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ.
-ರಸಿಕಾ ಮುರುಳ್ಯ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment