ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಂಟ್ವಾಳ: ಜೋಡುಮಾರ್ಗ ಜೇಸಿ ಪದಗ್ರಹಣ

ಬಂಟ್ವಾಳ: ಜೋಡುಮಾರ್ಗ ಜೇಸಿ ಪದಗ್ರಹಣ


ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಜೋಡುಮಾರ್ಗ ಜೇಸಿ ಇದರ ಪದಗ್ರಹಣ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು.


ಬಂಟ್ವಾಳ: ಇಲ್ಲಿನ ಜೋಡುಮಾರ್ಗ ಜೇಸಿ ಇದರ ನೂತನ ಅಧ್ಯಕ್ಷರಾಗಿ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಿಕ್ಷಕ ಹರಿಪ್ರಸಾದ್ ಕುಲಾಲ್ ಇವರು ಅಧಿಕಾರ ಸ್ವೀಕರಿಸಿದ್ದಾರೆ.  


ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು. ಉದ್ಯಮಿ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಜೇಸಿ ವಲಯ ಉಪಾಧ್ಯಕ್ಷ ದೀಪಕ್ ಗಂಗೂಲಿ ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷೆ ಶೈಲಜಾ ರಾಜೇಶ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಕಿಶನ್ ಎನ್. ರಾವ್ ವಂದಿಸಿದರು. ಮಾಜಿ ಕಾರ್ಯದರ್ಶಿ ಮಲ್ಲಿಕಾ ಆಳ್ವ ಇದ್ದರು.


ಪದಗ್ರಹಣ:

ನೂತನ ಪದಾಧಿಕಾರಿಗಳಾಗಿ ಜೀವನ್ ಎ.ಕುಲಾಲ್, ಗಾಯತ್ರಿ ಲೋಕೇಶ್, ಧೀರಜ್ ಹೆಬ್ರಿ, ಅಮಿತಾ ಹರ್ಷರಾಜ್, ಹರಿಶ್ಚಂದ್ರ ಆಳ್ವ, ರವೀಂದ್ರ ಕುಕ್ಕಾಜೆ, ದೀಪ್ತಿ ಶ್ರೀನಿಧಿ ಭಟ್ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ಡಾಕ್ಟರೇಟ್ ಪುರಸ್ಕೃತ ಧೀರಜ್ ಹೆಬ್ರಿ ಮತ್ತು ರಾಷ್ಟ್ರೀಯ ತರಬೇತುದಾರ ಡಾ. ರಾಘವೇಂದ್ರ ಹೊಳ್ಳ ಇವರನ್ನು ಅಭಿನಂದಿಸಲಾಯಿತು.


0 Comments

Post a Comment

Post a Comment (0)

Previous Post Next Post