ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶೀಘ್ರದಲ್ಲೇ ಅಲ್ಲು ಅರ್ಜುನ್ ಬಾಲಿವುಡ್ ಗೆ ಎಂಟ್ರಿ.....

ಶೀಘ್ರದಲ್ಲೇ ಅಲ್ಲು ಅರ್ಜುನ್ ಬಾಲಿವುಡ್ ಗೆ ಎಂಟ್ರಿ.....

ಮುಂಬೈ: ನಟ ಅಲ್ಲು ಅರ್ಜುನ್ ಅವರಿಗೆ ಹಿಂದಿ ಚಿತ್ರದಲ್ಲಿ ನಟಿಸಲು ಆಫರ್ ಬಂದಿದ್ದು ಯಾವಾಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ.

ಅಲ್ಲು ಅರ್ಜುನ್ ಅವರ ಇತ್ತೀಚಿನ ತೆಲುಗು ಚಿತ್ರ "ಪುಷ್ಪ: ದಿ ರೈಸ್" ಡಿಸೆಂಬರ್ 17 ರಂದು ಬಿಡುಗಡೆಯಾಗಿತ್ತು.  ವಿಶ್ವದಾದ್ಯಂತ 300 ಕೋಟಿ ರೂ.ಗಳಿಸಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಮುಂದೆ ಅಭಿಮಾನಿಗಳು ಇವರ ಬಾಲಿವುಡ್ ಎಂಟ್ರಿ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ.

ಇನ್ನು ಹಿಂದಿ ಚಿತ್ರದಲ್ಲಿ ನಟಿಸುವ ಬಗ್ಗೆ ಮಾತನಾಡಿರುವ ಅಲ್ಲು ಅರ್ಜುನ್ " ಬಾಲಿವುಡ್ ಚಲನಚಿತ್ರದಲ್ಲಿ ನಟಿಸಲು ನಾನು ಉತ್ಸುಕನಾಗಿದ್ದೇನೆ. ನನಗೆ ಪ್ರಸ್ತಾಪ ಬಂದಿದೆ. ಶೀಘ್ರದಲ್ಲೇ ಇದರ ಬಗ್ಗೆ ಯೋಚಿಸಿ ಧೈರ್ಯದಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ" ಎಂದು ಪಿಟಿಐ ಗೆ ತಿಳಿಸಿದ್ದಾರೆ.

0 Comments

Post a Comment

Post a Comment (0)

Previous Post Next Post