ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾಹಸ ಸಿಂಹ ವಿಷ್ಣುವರ್ಧನ್ ಅಗಲಿ ಇಂದಿಗೆ 12 ವರ್ಷ

ಸಾಹಸ ಸಿಂಹ ವಿಷ್ಣುವರ್ಧನ್ ಅಗಲಿ ಇಂದಿಗೆ 12 ವರ್ಷ

ಅಭಿಮಾನಿಗಳ ಪ್ರೀತಿಯ ನಾಯಕ, ಸಾಹಸಸಿಂಹ ವಿಷ್ಣುವರ್ಧನ್ ಅಗಲಿ ಇಂದಿಗೆ 12 ವರ್ಷ. ಈ ಹನ್ನೆರಡು ವರ್ಷಗಳಲ್ಲಿ ಸಾಹಸ ಸಿಂಹ ವಿಷ್ಣುದಾದ ಅಭಿಮಾನಿಗಳು ಇವರನ್ನು ನೆನೆಯದ ದಿನವಿಲ್ಲ.

ಅವರ ಹುಟ್ಟುಹಬ್ಬವನ್ನು ಕೂಡ ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿರುವ ಅಭಿಮಾನಿಗಳಿಗೆ ವಿಷಾದದ ವಿಷಯವೆಂದರೆ ಅವರ ಸಮಾಧಿ ನಿರ್ಮಾಣ ಆಗದಿರುವುದು. ಆದರೂ ಕೂಡ ಅವರ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ವಿಷ್ಣು ಹೆಸರನ್ನು ಚಿರಸ್ಥಾಯಿಯನ್ನಾಗಿಸಿದ್ದಾರೆ. 

'ವಂಶವೃಕ್ಷ' ಚಲನಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿ ರಾಮಚಾರಿಯಾಗಿ ಎದ್ದು ನಿಂತ ವಿಷ್ಣುವರ್ಧನ್ ಮತ್ತೆ ತಿರುಗಿ ನೋಡಲೇ ಇಲ್ಲ. ಇನ್ನೂರು ಚಿತ್ರಗಳ ಗಟಿ ದಾಟಿದ ವಿಷ್ಣುವರ್ಧನ್ ಚಾರಿತ್ರಿಕ, ಪೌರಾಣಿಕ ಹಾಗೂ ಸಾಮಾಜಿಕ ಪಾತ್ರಗಳಲ್ಲಿ ನಟಿಸಿ ಎಲ್ಲರ ಅಭಿಮಾನವನ್ನು ಗೆದ್ದಿದ್ದರು.

ತುಂಬು ಮಾನವೀಯತೆ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕ ನಟರಾಗಿ ಅಪಾರ ಅಭಿಮಾನಿ ವರ್ಗವನ್ನು ಸಂಪಾದಿಸಿದ್ದರು. ಸಾಹಸಸಿಂಹ, ಭಗ್ನಪ್ರೇಮಿ, ಬಂಗಾರದ ಜಿಂಕೆ, ಆಪ್ತಮಿತ್ರ, ಆಪ್ತರಕ್ಷಕ ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರು ನಮ್ಮನಗಲಿ ಇಂದಿಗೆ 12 ವರ್ಷ ಸಂದಿದೆ.

0 Comments

Post a Comment

Post a Comment (0)

Previous Post Next Post