ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಳ್ಯ; ಬೈಹುಲ್ಲು ತುಂಬಿದ ಲಾರಿ ಪಲ್ಟಿಯಾಗಿ ವಿದ್ಯುತ್ ತಂತಿ ತಗುಲಿ ಅಪಾರ ನಷ್ಟ

ಸುಳ್ಯ; ಬೈಹುಲ್ಲು ತುಂಬಿದ ಲಾರಿ ಪಲ್ಟಿಯಾಗಿ ವಿದ್ಯುತ್ ತಂತಿ ತಗುಲಿ ಅಪಾರ ನಷ್ಟ

 


ಸುಳ್ಯ : ಬೈಹುಲ್ಲು ಸಾಗಾಟದ ಲಾರಿ ಬಸ್ಸಿಗೆ ದಾರಿಬಿಟ್ಟು ಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿಳುವ ವೇಳೆ ವಿದ್ಯುತ್ ತಂತಿ ತಗುಲಿ ಸಂಪೂರ್ಣ ಭಸ್ಮಗೊಂಡ ಘಟನೆಯೊಂದು ತಾಲೂಕಿನ ದೊಡ್ಡತೋಟ ಎಂಬಲ್ಲಿ ಮುಂಜಾನೆ ವೇಳೆ ಸಂಭವಿಸಿದೆ.

ಈ ವೇಳೆ ಲಾರಿಯ ಚಾಲಕ ಸತೀಶ್, ಮಾಲಕ ರಾಜೇಶ್ ಹಾಗೂ ಪುಟ್ಟರಾಜು ಎಂಬವರು ಲಾರಿಯಿಂದ ತಕ್ಷಣ ಹೊರಬಂದು ಪಾರಾಗಿದ್ದಾರೆ.


ಸಕಲೇಶಪುರದಿಂದ ಮುಳ್ಳೇರಿಯಕ್ಕೆ ಬೈಹುಲ್ಲನ್ನು ಸಾಗಿಸುತ್ತಿದ್ದ ಈ ಲಾರಿ ದೊಡ್ಡತೋಟ ಕಂದಡ್ಕದ ಮಧ್ಯೆ ಕಾಸಿನಗೋಡ್ಲು ತಿರುವು ದಾಟುತ್ತಿದ್ದ ವೇಳೆ ಎದುರಿನಿಂದ ಬಸ್ಸೊಂದು ಬಂದಿದ್ದು, ಬಸ್ಸಿಗೆ ಸೈಡ್ ಕೊಡುವ ಸಮಯದಲ್ಲಿ ಲಾರಿ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಲಾರಿಯನ್ನು ಹಠಾತ್ತನೇ ಬಲಕ್ಕೆ ತಿರುಗಿಸಿದ್ದಾರೆ.

ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಉರುಳಿಬಿದ್ದಿದೆ. ಬೀಳುತ್ತಿದ್ದಂತೆ ಲಾರಿಯಲ್ಲಿದ್ದ ಬೈಹುಲ್ಲು ಹೈಟೆನ್ಶನ್ ವಿದ್ಯುತ್ ತಂತಿಯ ಸ್ಪರ್ಶಕ್ಕೊಳಗಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯು ಕ್ಷಣ ಮಾತ್ರದಲ್ಲಿ ಉರಿದು ಇಡೀ ಲಾರಿಯನ್ನು ಆವರಿಸಿದೆ.


ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಷ್ಟು ಹೊತ್ತಿಗಾಗಲೇ ಲಾರಿ ಸಂಪೂರ್ಣ ಬೆಂಕಿಗೆ ಅಹುತಿಯಾಗಿ ಅವಶೇಷಗಳು ಮಾತ್ರ ಉಳಿದುಕೊಂಡಿದೆ.


ಇದರಿಂದ ಸುಮಾರು 3 ರಿಂದ 5 ಲಕ್ಷ ರೂ. ನಷ್ಟ ಸಂಭವಿಸಬಹುದೆಂದು ಅಂದಾಜಿಸಲಾಗಿದೆ.


0 Comments

Post a Comment

Post a Comment (0)

Previous Post Next Post