ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ಯಾಂಡಲ್ ವುಡ್ ನಟಿಗೆ ಸುಧಾರಾಣಿಗೆ ಡಾಕ್ಟರೇಟ್ ಗೌರವ

ಸ್ಯಾಂಡಲ್ ವುಡ್ ನಟಿಗೆ ಸುಧಾರಾಣಿಗೆ ಡಾಕ್ಟರೇಟ್ ಗೌರವ


ಬೆಂಗಳೂರು: ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟಿ ಸುಧಾರಾಣಿಯವರಿಗೆ ತಾವು ಕಲಾಕ್ಷೇತ್ರದಲ್ಲಿ ಮಾಡಿದ ಸಾಧನೆಗೆ  ಗೌರವ ಡಾಕ್ಟರೇಟ್ ನೀಡಲಾಗಿದೆ. ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ನಿಂದ ತನಗೆ ಸಿಕ್ಕ ಪ್ರಶಂಸೆಯ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ಉತ್ತಮ ನಟಿಯಾಗಿ ಜನರ ಮನಸ್ಸನ್ನು ಗೆದ್ದಿರುವ ಇವರು ಬಾಲ್ಯದಲ್ಲೇ ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು. ತಮ್ಮ 12ನೇ ವಯಸ್ಸಿನಲ್ಲಿ ಶಿವರಾಜ್ ಕುಮಾರ್ ಅವರ ಮೊದಲ ಸಿನಿಮಾ " ಆನಂದ್" ಗೆ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. 

ಅಂದಿನಿಂದ ಇಂದಿನವರೆಗೆ ಕೇವಲ ನಟಿಯಾಗಿ ಮಾತ್ರವಲ್ಲದೆ ಪೋಷಕ ನಟಿಯಾಗಿಯೂ ಅಭಿಮಾನವನ್ನು ಸಂಪಾದಿಸಿದ್ದಾರೆ. ಇವರನ್ನು ಬಹು ಬೇಡಿಕೆಯ ನಟಿ ಎಂದರೂ ತಪ್ಪಾಗಲಾರದು. 

0 Comments

Post a Comment

Post a Comment (0)

Previous Post Next Post