ಬೆಂಗಳೂರು: ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಒ ಗಳ ಜೊತೆ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದು ಇದಕ್ಕೆ ಸಂಬಂಧಿಸಿದಂತೆ ಕೆಲವು ಆದೇಶಗಳನ್ನು ನೀಡಿದ್ದೇನೆ. ಜನರು ಇರುವ ಕಡೆ ಹೋಗಿ ನಾವು ಕೆಲಸ ಮಾಡಬೇಕಾಗುತ್ತದೆ ಮತ್ತು ಗ್ರಾಮಗಳಿಗೆ ಭೇಟಿ ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ ' ಇವತ್ತು ಡಿ.ಸಿ ಗಳ ಜೊತೆ ಮಾತನಾಡಿದ್ದೇನೆ. ರಾಜ್ಯದಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಕೂಡ ಅತ್ಯಂತ ಪ್ರಮುಖವಾದದ್ದು. ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಾಗಿ ಡಿಸಿಗಳು ಕೆಲಸ ಮಾಡುತ್ತಾರೆ. ಆಡಳಿತದ ಮೇಲೆ ಅವರ ಪಾತ್ರ ಬಹಳಷ್ಟು ಅವಲಂಬನೆಯಾಗಿದೆ' ಎಂದು ಹೇಳಿದರು.
ರೈತರ ಬಾಕಿ ಬೆಳೆ ಪರಿಹಾರ ಕೊಡಲು ಸೂಚನೆ ನೀಡಲಾಗಿದ್ದು ನೆನೆಗುದಿಗೆ ಬಿದ್ದಿರುವ ಹಲವು ವಿಚಾರಗಳ ಬಗ್ಗೆ ಸಭೆ ನಡೆಸಿದ್ದೇನೆ. ಅಕ್ರಮ- ಸಕ್ರಮಗಳ ಬಗ್ಗೆ, ಗೋಮಾಳಗಳ ಸಕ್ರಮದ ಬಗ್ಗೆ , ಕಾನೂನು ತೊಡಕುಗಳ ಬಗ್ಗೆ ಚರ್ಚಿಸಲಾಯಿತು ಎಂದರು.
ಆರೋಗ್ಯ ಸೌಕರ್ಯ ಹೆಚ್ಚಿಸಲು ಸೂಚನೆ ನೀಡಲಾಗಿದ್ದು ಆಯುಷ್ಮಾನ್ ಭಾರತ ಕಾರ್ಡ್ ಗಳನ್ನು ಮಾಡಲು ಸೂಚನೆ ನೀಡಿದ್ದೇವೆ. ಬಿ.ಪಿ.ಎಲ್ ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಮಾಡಿ ಆಯುಷ್ಮಾನ್ ಕಾರ್ಡ್ ಕೊಡಲು ಸೂಚನೆ ನೀಡಲಾಗಿದೆ ಎಂದರು.
Post a Comment