ಲಂಡನ್ : ಪ್ರತಿಭಾವಂತ ಸಿನಿಮಾ ನಟರ ನೋವು ಈ ವರ್ಷ ಎಲ್ಲರಿಗೂ ದುಃಖ ತಂದಿದೆ. ಅದರ ಮಧ್ಯೆ ಇದೀಗ ಮತ್ತೊಂದು ಆಘಾತ ಉಂಟಾಗಿದೆ. ಬಾಲಿವುಡ್ ನ ಖ್ಯಾತ ನಿರ್ಮಾಪಕ ಕೊನೆಯುಸಿರೆಳೆದಿದ್ದಾರೆ.
ಹಿಂದಿ ಚಿತ್ರರಂಗಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಾ ಬಂದಿರುವ ಹಿಟ್ ಸಿನಿಮಾಗಳ ನಿರ್ಮಾಪಕ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ. ಇವರು ಲಂಡನ್ ನಲ್ಲಿ ನಿಧನ ಹೊಂದಿದ್ದು ಹಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಚಿಕಿತ್ಸೆಗಾಗಿ ಲಂಡನ್ ಗೆ ಹೋಗಿದ್ದ ವಿಜಯ್ ಗಲ್ರಾನಿ ಚಿಕಿತ್ಸೆ ಫಲಕಾರಿಯಾಗದೆ ಅಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇವರ ಸಾವಿಗೆ ಇಡೀ ಬಾಲಿವುಡ್ ತಂಡ ಕಂಬನಿ ಮಿಡಿದಿದೆ.
ಬಾಲಿವುಡ್ ನ ಖ್ಯಾತ ನಟರ ಜೊತೆ ಆಪ್ತರಾಗಿದ್ದ ಇವರು ಸೂರ್ಯವಂಶಿ, ಅಚಾನಕ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಇವರ ಕೊನೆಯ ಚಿತ್ರ 'ದಿ ಪವರ್' . ಈ ವಿತ್ರ ಇದೇ ವರ್ಷ ಜನವರಿ ತಿಂಗಳಿನಲ್ಲಿ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿತ್ತು.
Post a Comment