ಹಾವೇರಿ: ರಾಜ್ಯದ ಎಲ್ಲ ಜಿಲ್ಲಾ ಸರ್ಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಶಾಲೆಗಳಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯ ಅವಧಿ 24 ತಿಂಗಳಾಗಿದ್ದು, ಕನಿಷ್ಠ 17 (ಡಿಸೆಂಬರ್-31) ರಿಂದ ಗರಿಷ್ಠ 30ರ ವಯೋಮಾನದ ದ್ವಿತಿಯ ಪಿ.ಯು.ಸಿ ಪಾಸಾದ ಮಹಿಳಾ ಅಭ್ಯರ್ಥಿಗಳು ಅಭ್ಯರ್ಥಿಗಳು ಸಲ್ಲಿಸಬಹುದು.
ಅಭ್ಯರ್ಥಿಯು ಭಾರತೀಯ ನಾಗರೀಕರಾಗಿದ್ದು, ಕನಿಷ್ಠ 5 ವರ್ಷ ಕರ್ನಾಟಕ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಅರ್ಜಿಗಳನ್ನು ವೆಬ್‍ಸೈಟ್ ನಿಂದ ಡೌನ್‍ಲೋಡ್ ಮಾಡಿಕೊಂಡು (www.karhfw.gov.in) ಇದೇ ವೆಬ್‍ಸೈಟ್‍ನಲ್ಲಿ ಹೋಂ ಪೇಜಿನ ಎಡಭಾಗದಲ್ಲಿ (SIHFW ನಲ್ಲಿ) ಈ ಅರ್ಜಿಗಳನ್ನು ಪಡೆದುಕೊಳ್ಳಬಹುದಾಗಿದೆ.
ತರಬೇತಿಗೆ 30 ಅಭ್ಯರ್ಥಿಗಳನ್ನು ಮೆರಿಟ್ ಇನ್ನಿತರ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ದ್ವಿ-ಪ್ರತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಆಡಳಿತ ಭವನ, ಹಾವೇರಿ ಈ ವಿಳಾಸಕ್ಕೆ ದಿನಾಂಕ 10-12-2021ರ ಸಂಜೆ 5-30 ಗಂಟೆಯೊಳಗೆ ಸಲ್ಲಿಸಬೇಕು.
Post a Comment