ನಾವು ಪ್ರಥಮ ಎಮ್.ಸಿ.ಜೆಯಲ್ಲಿ ಇರಬೇಕಾದ್ರೆ ಉಪನ್ಯಾಸಕರೆಲ್ಲ ಹೇಳೋರು "ಫೈನಲ್ ಇಯರ್ ಹತ್ರ ಬರ್ತಿದೆ. ರಿಸರ್ಚ್ ವರ್ಕ್ ಮಾಡಬೇಕು.ಆದಷ್ಟು ಬೇಗ ವಿಷಯವನ್ನು ಆಯ್ಕೆಮಾಡಿಕೊಳ್ಳಿ" ಅಂತ. ನಾವು ಆ ಲಾಕ್ಡೌನಲ್ಲಿ ಸ್ವಲ್ಪ ಉದಾಸೀನ ತೋರಿದ್ದೇ ಶಾಪವಾಯಿತೋ ಏನೋ.
ಜ್ಯೂನಿಯರ್ ಆಗಿದ್ದಾಗ ರೂಮಿನಲ್ಲಿದ್ದ ಸೀನಿಯರ್ಸ್ ರಾತ್ರಿ ನಿದ್ದೆ ಬಿಟ್ಟು ಕೆಲಸದಲ್ಲಿ ಬ್ಯುಸಿ ಆಗಿರುವಾಗ ಅಯ್ಯೋ ನನ್ನ ಸ್ವರ್ಗ ಸುಖವೇ. ಬೇಗ ಮಲಗ್ಬೋದು ಅಂತೆಲ್ಲ ಸಂಭ್ರಮಿಸುತ್ತಿದ್ದೆ. ಅದೇ ನನ್ನ ಸರದಿ ಬಂತು ನೋಡಿ. ನಿಜವಾದ ಸಂಶೋಧನಾ ಕೆಲಸದ ಪಾಡು ತಿಳಿದಿದ್ದು. ಇನ್ನು ಒಂದು ವಾರದಲ್ಲಿ ಮಾಡಿ ಮುಗಿಸಬೇಕೆನ್ನುವ ಷರತ್ತಿನೆದುರು ಊಟ, ನಿದ್ದೆ ಬಿಟ್ಟು ಅದಕ್ಕೆ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹಾಳಾದ ಸಮಯಕ್ಕೆ ಲ್ಯಾಪ್ ಟಾಪ್ ಕೂಡ ಕೈ ಕೊಟ್ಟಾಗ ಯಾರನ್ನು ಏನೆನ್ನಲಿ ಹೇಳಿ. ಕಷ್ಟದಲ್ಲಿರಲು ಗೆಳತಿಯರೂ ಕೈ ಕೊಟ್ಟಾಗ ಉಫ್ ಈ ಸಂಶೋಧನೆ ಜೀವನವನ್ನೇ ಕಲಿಸಿತ್ತಲ್ಲ ಅನ್ನೋ ಭಾವನೆಯನ್ನೂ ಮೂಡಿಸಿದ್ದು ಸುಳ್ಳಲ್ಲ. ಅಂತೂ ಕೊನೆ ಘಳಿಗೆಯಲ್ಲಿ ನಾ ಪಟ್ಟ ಶ್ರಮದಿಂದ ಪುಸ್ತಕ ಪ್ರಿಂಟ್ ಆಗಿ ಕೈಗೆ ಸಿಕ್ಕಾಗ ಕಣ್ಣು ಮಾತ್ರ ತೇವಗೊಂಡಿತ್ತು. ಶ್ರಮಕ್ಕೆ ಸಾರ್ಥಕತೆ ಲಭಿಸಿತ್ತು. ಅದೇನೇ ಆದರೂ ರಿಸರ್ಚ್ ಎಂಬ ರಾಮಾಯಣ ಹೇಳಿದಷ್ಟು ಮುಗಿಯಲ್ಲ ಬಿಡಿ.......
-ಅರ್ಪಿತಾ ಕುಂದರ್
Post a Comment