ರಾಮನಗರ: ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಮತ್ತೊಬ್ಬ ಅಭಿಮಾನಿ ನೇಣಿಗೆ ಶರಣಾಗಿದ್ದಾನೆ.
ಚನ್ನಪಟ್ಟಣದ ಎಲೆಕೇರಿಯ ವೆಂಕಟೇಶ್ (26)ವರ್ಷದ ಪುನೀತ್ ಅವರ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವೆಂಕಟೇಶ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಪುನೀತ್ ಅಕಾಲಿಕ ನಿಧನದಿಂದ ಮನ ನೊಂದಿದ್ದ ವೆಂಕಟೇಶ್, ಕಳೆದ ಮೂರು ದಿನಗಳಿಂದ ಊಟ ಕೂಡ ಬಿಟ್ಟಿದ್ದನಂತೆ.
ವೃತ್ತಿಯಿಂದ ಈತ ಕ್ಷೌರಿಕನಾಗಿದ್ದನು. ಅಪ್ಪು ಸಮಾಧಿ ನೋಡಲು ಹಠ ಹಿಡಿದಿದ್ದನಂತೆ. ಅಪ್ಪು ಸಮಾಧಿ ನೋಡಲೇಬೇಕೆಂಬ ಆಶಯ ಹೊಂದಿದ್ದನಂತೆ.
ಆದರೆ ಇದ್ದಕ್ಕಿದ್ದಂತೆ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
Post a Comment