ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಹಾಗೂ ಕನ್ನಡ ಕರಾವಳಿ ಸಮ್ಮಿಲನ ಬಳಗ ಇದರ ಜಂಟಿ ಆಶ್ರಯದಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮ ಬುಧವಾರ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ನಡೆಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಪ್ರಾಂಶುಪಾಲರಾದ ವರದರಾಜ ಚಂದ್ರಗಿರಿ ವಹಿಸಿದ್ದರು. ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರಾಜ್ಯಾಧ್ಯಕ್ಷರಾದ ಡಾ. ಶೇಖರ ಅಜೆಕಾರು ಉದ್ಘಾಟಿಸಿದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಕವಯಿತ್ರಿ, ಜನಮಿಡಿತ ಪತ್ರಿಕೆಯ ಹಾಸನ ಜಿಲ್ಲೆಯ ಪ್ರತಿನಿಧಿಯಾದ ರೇಷ್ಮಾ ಶೆಟ್ಟಿ ಗೊರೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಾರಾಯಣ ರೈ ಕುಕ್ಕುವಳ್ಳಿ, ಯುವ ಕವಿ, ವಿವೇಕಾನಂದ ಪದವಿ ಕಾಲೇಜು ಪುತ್ತೂರಿನ ಲ್ಯಾಬ್ ಸಹಾಯಕರಾದ ನಾರಾಯಣ ಕುಂಬ್ರ, ನವ ಪರ್ವ ಫೌಂಡೇಶನ್ ಮಂಗಳೂರು ಘಟಕದ ಉಪಾಧ್ಯಕ್ಷರಾದ ಮಾನಸ ಪ್ರವೀಣ್ ಭಟ್, ಕವಯಿತ್ರಿ ನವಜೀವನ ಪ್ರೌಢಶಾಲೆ ಪೆರಡಾಲದ ಶಿಕ್ಷಕಿಯಾದ ಜ್ಯೋತ್ಸ್ನಾ ಎನ್ ಕಡಂದೇಲು, ಕನ್ನಡ ಕರಾವಳಿ ಸಮ್ಮಿಲನ ಬಳಗದ ಸಂಸ್ಥಾಪಕರಾದ ಚಂದ್ರಮೌಳಿ ಕಡಂದೇಲು, ಅಧ್ಯಕ್ಷರಾದ ಅಖಿಲಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತಿ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಸಭಾಕಾರ್ಯಕ್ರಮದ ಬಳಿಕ ನಡೆದ ಕವಿಗೋಷ್ಠಿಯಲ್ಲಿ ಮೂವತ್ತಕ್ಕಿಂತಲೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಅನುಪಮಾ ಮತ್ತು ತಂಡ ಪ್ರಾರ್ಥಿಸಿದರು. ಕನ್ನಡ ಕರಾವಳಿ ಸಮ್ಮಿಲನ ಬಳಗದ ಸದಸ್ಯರಾದ ಸೌಮ್ಯಶ್ರೀ ಪಿಲಿಕೂಡ್ಲು ಸ್ವಾಗತಿಸಿ, ಸಾರ್ಥಕ್ ರೈ ಹಾಗೂ ಸಜಿತ್ ಕೊಪ್ಪಳ ಕಾರ್ಯಕ್ರಮವನ್ನು ನಿರೂಪಿಸಿದರು. ಸಂತೋಷ್ ಕುಮಾರ್ ವಂದಿಸಿದರು.
ಭಾಗವಹಿಸಿದ ಕವಿಗಳಿಗೆ ಎರಡು ಪುಸ್ತಕಗಳು, ಕನ್ನಡದ ಶಾಲು ಹಾಗೂ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕರಿಸಿದ ರಾಷ್ಟ್ರೀಯ ಸ್ವಯಂ ಸೇವಕ ಘಟಕದ ಸದಸ್ಯರನ್ನು ಗೌರವಿಸಲಾಯಿತು. ಕಾಲೇಜಿನ ಸರ್ವ ಸದಸ್ಯರು ಹಾಗೂ ಸಾಹಿತ್ಯಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment