ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ಪೊಲೀಸ್ ಕಾನ್ ಸ್ಟೆಬಲ್ ಒಬ್ಬರ ಮಗನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಇಲ್ಲಿನ ವಿದ್ಯಾಸಾಗರ ನಿವಾಸಿ ಅಭಿಷೇಕ ಚಂದ್ರಕಾಂತ (27)ವರ್ಷ ಎಂಬಾತ ಕೊಲೆಯಾದ ಯುವಕ.
ಅಭಿಷೇಕ ಗುರುವಾರ ಬೆಳಿಗ್ಗೆ ಮನೆಯಿಂದ ಜಿಮ್ ಗೆ ಹೋಗುವುದಾಗಿ ಹೇಳಿ ಬಂದಿದ್ದರು. ದಾರಿಯಲ್ಲಿ ಮಾರಕಾಸ್ತ್ರ ಹಿಡಿದ ದುಷ್ಕರ್ಮಿಗಳು ಆತನನ್ನು ಬೆನ್ನಟ್ಟಿದರು. ಇದನ್ನು ಗಮನಿಸಿದ ಅಭೀಷೇಕ ತನ್ನ ಬೈಕ್ ಬಸ್ ನಿಲ್ದಾಣ ಬಳಿ ನಿಲ್ಲಿಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ.
ಸಹಾಯಕ್ಕಾಗಿ ಜನರ ಮಧ್ಯೆಯೂ ಓಡಿದ. ಆದರೆ ಬಸ್ ನಿಲ್ದಾಣ ಒಳಗೇ ಓಡಿ ಬಂದ ದುಷ್ಕರ್ಮಿಗಳು ಆತನ ಕತ್ತು ಕೊಯ್ದು ಪರಾರಿಯಾದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆ ಆರೋಪಿಗಳು ಹಾಗೂ ಕೊಲೆಯ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಅಶೋಕ್ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಶೋಕ್ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Post a Comment