ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಲಿಸುವ ಗೋಆಲಯದ ರೂವಾರಿ ಗಣೇಶ ಭಟ್ ಮುಣ್ಚಿಕಾನ ಅವರ ನಿವಾಸದಲ್ಲಿ ವಿಶೇಷ ಗೋಪೂಜೆ ಸಂಪನ್ನ

ಚಲಿಸುವ ಗೋಆಲಯದ ರೂವಾರಿ ಗಣೇಶ ಭಟ್ ಮುಣ್ಚಿಕಾನ ಅವರ ನಿವಾಸದಲ್ಲಿ ವಿಶೇಷ ಗೋಪೂಜೆ ಸಂಪನ್ನ



ಬದಿಯಡ್ಕ: ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಅಮೂಲ್ಯ ಗೋಸಂಪತ್ತಿನ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ, ಸಂಬೋಧನೆ ಎಂಬ ಸಂಕಲ್ಪದ ಕಾರ್ಯ ಯೋಜನೆಯಂತೆ ಚಲಿಸುವ ಗೋಆಲಯದ ರೂವಾರಿ ಶ್ರೀ ಗಣೇಶ ಭಟ್ ಮುಣ್ಚಿಕಾನ ಇವರ ನಿವಾಸದಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಗೋಪೂಜೆಯು ನೆರವೇರಿತು.


ಶ್ರೀ ಗಣೇಶ ಭಟ್ ಮುಣ್ಚಿಕಾನ, ಸವಿತಾ ಗಣೇಶ್ ಭಟ್, ಸಮಸ್ತ ಗೋಭಕ್ತರು ಸೇರಿ ಗೋಮಾತೆಗೆ ವಿಶೇಷ ಗೋಪೂಜೆಯನ್ನು ಸಲ್ಲಿಸಿದರು. ಮೂವತ್ತಮೂರು ಬಗೆ ಪಾಯಸ ನೈವೇದ್ಯಗಳನ್ನು ತಯಾರಿಸಿ ಗೋವಿಗೆ ಸಮರ್ಪಿಸುವುದರ ಮೂಲಕ, ಗಣೇಶ ಭಟ್ ಹಾಗೂ ಕುಟುಂಬದವರು ಮೂವತ್ತಮೂರು ಕೋಟಿ ದೇವತೆಗಳ ಆವಾಸಸ್ಥಾನವಾದ ಗೋಮಾತೆಗೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಒಟ್ಟುಗೂಡಿದ ಭಕ್ತರ ಕೈಯ್ಯಾರೆ ಒಂದೊಂದು ಬಗೆ ಪಾಯಸವನ್ನು ಗೋಮಾತೆಗೆ ಸಮರ್ಪಿಸಲಾಯಿತು.


ಗೋಪೂಜೆಯ ಭಾಗವಾಗಿ ಸಿದ್ದೇಶ ರಾಮ ಮುಣ್ಚಿಕಾನ, ಆತ್ಮಿಕಾ ಗುಣಾಜೆ, ಅವನಿ ಭಟ್, ಮನ್ವಿತಾ ಮುಣ್ಚಿಕಾನ ಇವರು ಭಜನೆಗಳನ್ನು ಹಾಡಿದರು.


ಪ್ರಸಾದ ಹಾಗೂ ಲಘು ಉಪಹಾರಗಳನ್ನು ಸ್ವೀಕರಿಸುವುದರೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಯಿತು. ಗೋಭಕ್ತರಿಂದ ಗೋಭಕ್ತರಿಗಾಗಿ ನಡೆದ ಈ ಕಾರ್ಯಕ್ರಮವು ಯಶಸ್ವಿಯಾಗಿ ಪೂರ್ಣಗೊಂಡಿತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post