ಚಿತ್ರದುರ್ಗ: "ಮುಂಬರುವ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಸ್.ಟಿ ಮೀಸಲು ಕ್ಷೇತ್ರದಿಂದ ನಾನು ಸ್ಪರ್ಧಿಸುವುದು ಖಚಿತ" ಎಂದು ಮಾಜಿ ಸಂಸದ, ನಟ ಶಶಿಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು "ರಾಜಕೀಯಕ್ಕೆ ಪ್ರವೇಶಿಸಿದಲ್ಲಿ ನನಗೆ ಜನಬೆಂಬಲದ ಮೇಲೆ ಅತ್ಯಂತ ವಿಶ್ವಾಸವಿದೆ. ಸ್ಪರ್ಧೆಯ ಬಗ್ಗೆ ಈಗಾಗಲೇ ರಾಜ್ಯದ ನಾಯಕರ ಜೊತೆ ಮಾತುಕತೆ ನಡೆಸಿದ್ದು ಉತ್ತಮವಾಗಿ ಸ್ಪಂದಿಸಿದ್ದಾರೆ. ನಾನು ಮಾಡಿದ ಅಭಿವೃದ್ದಿ ಕಾರ್ಯಗಳ ಬಗ್ಗೆ ಜನರಿಗೆ ಇನ್ನೂ ನೆನಪಿದೆ ಎಂದು ಭಾವಿಸುತ್ತೇನೆ. ನನ್ನ ತೀರ್ಮಾನದ ಬಗ್ಗೆ ಶೀಘ್ರವಾಗಿ ತಿಳಿಸುತ್ತೇನೆ" ಎಂದು ಹೇಳಿದ್ದಾರೆ.
Post a Comment