ಹರಿಹರ: ನಗರದ ಶಿವಮೊಗ್ಗ ರಸ್ತೆಯಲ್ಲಿನ ಪ್ರಭಾಕರ್ ಫರ್ನೀಚರ್ ಮಳಿಗೆ ಹಾಗೂ ಮಮತಾ ವಾಚ್ ಸೆಂಟರ್ ಅಂಗಡಿಗೆ ಶುಕ್ರವಾರ ಮಧ್ಯ ರಾತ್ರಿ ಬೆಂಕಿ ಸಂಭವಿಸಿದ್ದು, ಲಕ್ಷಾಂತರ ರೂ ವಸ್ತುಗಳು ಹಾನಿ ಸಂಭವಿಸಿದೆ.
ಶುಕ್ರವಾರ ಮಧ್ಯರಾತ್ರಿ ಮೊದಲನೇ ಮಹಡಿಯಲ್ಲಿರುವ ಪ್ರಭಾಕರ್ ಫರ್ನೀಚರ್ ಮಳಿಗೆ ಹಾಗೂ ನೆಲ ಮಹಡಿಯಲ್ಲಿರುವ ಮಮತಾ ವಾಚ್ ಸೆಂಟರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಕೆಲ ಹೊತ್ತಿನಲ್ಲೇ ಬೆಂಕಿ ಇಡೀ ಕಟ್ಟಡವನ್ನು ಆವರಿಸಿಕೊಂಡಿತು. ನೋಡ ನೋಡುತ್ತಿದ್ದಂತೆ ಬೆಂಕಿಯ ತೀವ್ರತೆ ಹೆಚ್ಚಾಗಿ ಲಕ್ಷಾಂತರ ಮೌಲ್ಯದ ಪೀಠೋಪರಣ ಹಾಗೂ ಅಪಾರ ಮೌಲ್ಯದ ವಾಚ್‌ಗಳು ಬೆಂಕಿಗೆ ಆಹುತಿಯಾಯಿತು.
ಹರಿಹರ, ದಾವಣಗೆರೆ, ಕುಮಾರಪಟ್ಟಣದಿಂದಲೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದರು. ಬೆಳಗಿನ ಜಾವದವರೆಗೂ ಕಾರ್ಯಾಚರಣೆ ಮುಂದುವರಿದಿತ್ತು.
Post a Comment