ತಮಿಳುನಾಡು ; ನಾಲ್ಕು ದಿನಗಳ ಹಿಂದೆ ಮದುವೆಯಾಗಿದ್ದ ನವ ದಂಪತಿಗಳು ಭೀಕರವಾಗಿ ರಸ್ತೆ ಅಫಘಾತದಲ್ಲಿ ಮೃತ ಪಟ್ಟಿದ್ದಾರೆ. ಅರೊಕ್ಕೋಣಂ ಪ್ರದೇಶದ 31ವರ್ಷದ ಮನೋಜ್ ಕುಮಾರ್ ಚೆನೈ ಪೆರುಂಬಕ್ಕಂ ನವರಾದ 30ವರ್ಷದ ಕಾರ್ತೀಕಾ ಯುವತಿ ನಾಲ್ಕು ದಿನಗಳ ಹಿಂದೆ ಮದುವೆಯಾಗಿದ್ದರು.
ಚೆನ್ನೈನಿಂದ ಮನೆಗೆ ಕಾರಿನಲ್ಲಿ ತೆರಳುತ್ತಿರುವಾಗ ಸಿಮೆಂಟ್ ಟ್ರಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮಪ್ಪೆಡು ಬಳಿಯ ಪೆರುಂಬಕ್ಕಂ-ಅರಕ್ಕೋಣಂ ರಸ್ತೆಯಲ್ಲಿ ಮನೆಗೆ ತೆರಳುವಾಗ ಸಿಮೆಂಟ್ ಟ್ರಕ್ ನವದಂಪತಿಗಳು ಹೋಗುತ್ತಿದ ಕಾರಿನ ಮೇಲೆ ಮಗುಚಿ ಬಿದ್ದಿದ್ದು ದಂಪತಿಗಳೂ ಸೇರಿದಂತೆ ಕಾರು ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ.
ಘಟನೆಯ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ದಂಪತಿಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದು 1 ಕಿಮೀ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಬಗ್ಗೆ ಮಪ್ಪೆಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment