ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ



ಪುಂಜಾಲಕಟ್ಟೆ: ಸರಕಾರಿ ಪ್ರಥಮದರ್ಜೆ ಕಾಲೇಜು ಪುಂಜಾಲಕಟ್ಟೆ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು, ಗ್ರಾಮ ಪಂಚಾಯತ್ ಪಿಲಾತಬೆಟ್ಟು, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ (ರಿ.), ಶ್ರೀ ಮುರುಘೇಂದ್ರ ವನಿತಾ ಸಮಾಜ (ರಿ.), ಯುವಸ್ಪಂದನ ಘಟಕ ಮಂಗಳೂರು ಹಾಗೂ ಕ್ರೀಡಾ ಇಲಾಖೆ ದಕ್ಷಿಣಕನ್ನಡ ಇದರ ಜಂಟಿ ಆಶ್ರಯದಲ್ಲಿ ಭಾರತೀಯ ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಯೋಗದೊಂದಿಗೆ ಇಂದು ರಕ್ತದಾನ ಶಿಬಿರವು ನಡೆಯಿತು.


ಕಾಲೇಜಿನ ನಿರ್ವಹಣಾ ವಿಭಾಗದ ಪ್ರಾಧ್ಯಾಪಕಿ ಪ್ರೊ ಗೀತಾ ಅವರು ರಕ್ತದಾನದ ಅವಶ್ಯಕತೆ ಬಗೆಗೆ ಅರಿವು ಮೂಡಿಸಿದರು. ಮುರುಘೇಂದ್ರ ಮಿತ್ರ ಮಂಡಳಿಯ ಗೌರವಾಧ್ಯಕ್ಷರಾದ ಮೋಹನ್ ಸಾಲಿಯಾನ್ ಹೆಗ್ಗಡೆಬೆಟ್ಟು ಹಾಗೂ ಪ್ರಾದೇಶಿಕ ರಕ್ತಪೂರಣ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ನವನೀತ್ ಅವರು ರಕ್ತದಾನದ ಬಗೆಗೆ ಉಪಯುಕ್ತ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಪಿಲಾತಬೆಟ್ಟು ಇಲ್ಲಿನ ಅಧ್ಯಕ್ಷರಾದ ಹರ್ಷಿಣಿ ಇವರು ಮಾತನಾಡಿ ಪ್ರತಿಯೊಂದು ರಕ್ತದ ಹನಿಯೂ ಅವಶ್ಯಕ. ಎಲ್ಲರೂ ರಕ್ತದಾನ ಮಾಡಬೇಕು. ಎಲ್ಲರಿಗೂ ಇದರ ಬಗೆಗೆ ಅರಿವು ಮೂಡಿಸಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಅವರು  ಕಾರ್ಯಕ್ರಮದ ಬಗೆಗೆ ಹಿತನುಡಿಗಳನ್ನಾಡಿದರು. ಬಳಿಕ ರಕ್ತದಾನ ಮಾಡಿದರು.




ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಗಪ್ಪ ಬಂಗೇರ ರವರು ಆಗಮಿಸಿ ಶುಭಹಾರೈಸಿದರು.


ಕಾರ್ಯಕ್ರಮದಲ್ಲಿ ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಹರ್ಷಿಣಿ, ಮುರುಘೇಂದ್ರ ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಆಶಾ ದಿನಕರ್, ಯುವಸ್ಪಂದನ ಮಂಗಳೂರು ಇಲ್ಲಿಯ ಯುವ ಪರಿವರ್ತಕರಾದ ಶಾಂತಪ್ಪ ಕಲ್ಮಂಜ, ಕಾಲೇಜಿನ IQAC ಘಟಕದ ಸಂಯೋಜಕರಾದ ಪ್ರೊ. ರವಿಶಂಕರ್, ಭಾರತೀಯ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಪ್ರೊ. ಗೀತಾ ಎಸ್. ಮತ್ತು ಪ್ರೊ ಶೇಖರ್ ಕೆ., ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸಂಚಾಲಕರಾದ ಪ್ರೊ. ಪ್ರೀತಿ ಕೆ. ರಾವ್ ಪ್ರೊ ಆಂಜನೇಯ ಎಂ.ಎನ್., ಜಿಲ್ಲಾ ಆಸ್ಪತ್ರೆ ಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಹರುಷ ಇವರು ಸ್ವಾಗತಿಸಿ ಶಮೀರ್ ಧನ್ಯವಾದವಿತ್ತರು. ರಾಫಿಯ ಇವರು ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post