ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಂಗಳೂರು ವಿ.ವಿ ಸ್ನಾತಕೋತ್ತರ ಪದವಿ ಗೆ ಅರ್ಜಿ ಅಹ್ವಾನ

ಬೆಂಗಳೂರು ವಿ.ವಿ ಸ್ನಾತಕೋತ್ತರ ಪದವಿ ಗೆ ಅರ್ಜಿ ಅಹ್ವಾನ ಬೆಂಗಳೂರು: ನಗರ ಜ್ಞಾನಭಾರತಿ ಆವರಣದಲ್ಲಿರುವಂತ ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ, ರಾಮನಗರ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಬಗ್ಗೆ ಬೆಂಗಳೂರು ವಿವಿ ಕುಲಸಚಿವರು ಅಧಿಸೂಚನೆ ಹೊರಡಿಸಿದ್ದು, ಕಲಾ, ವಿಜ್ಞಾನ, ಪೇಮೆಂಟ್ ಕೋರ್ಸ್, ವಾಣಿಜ್ಯ, ಶಿಕ್ಷಣ ಸ್ನಾತಕೋತ್ತರ ಎಂ.ಎ ಕೋರ್ಸ್ ಗಳ ವ್ಯಾಸಂಗಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ದಿನಾಂಕ 15-11-2021ರಿಂದ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿಯ ಜೊತೆಗೆ ಕೋರಿಕೆಗೆ ಬೇಕಾಗಿರುವ ಪೂರಕ ದಾಖಲೆಗಳನ್ನು ಆನ್ ಲೈನ್ ನಲ್ಲಿ ತುಂಬಬೇಕು. ಹೀಗೆ ಭರ್ತಿ ಮಾಡಿದಂತ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು, ಪೂರಕ ದಾಖಲೆಗಳ ಸಮೇತ ಡೌನ್ ಲೋಡ್ ಮಾಡಿಕೊಂಡು, ಅರ್ಜಿಗಳನ್ನು ಅಭ್ಯರ್ಥಿಗಳು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಆಯಾ ವಿಭಾಗದ ಮುಖ್ಯಸ್ಥರ, ನಿರ್ದೇಶಕರ ವಿಳಾಸಕ್ಕೆ ಅರ್ಜಿಗಳನ್ನು ಕಳುಹಿಸುವಂತೆ ತಿಳಿಸಿದ್ದಾರೆ.0 Comments

Post a Comment

Post a Comment (0)

Previous Post Next Post