ಮಂಗಳೂರು: "ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಾಹಿತಿ, ಸಮಾಜ ಸೇವಕಿ, ಮಾಲತಿ ಶೆಟ್ಟಿ ಮಾಣೂರು ಅವರಿಗೆ ಬೆಂಗಳೂರಿನ ಜನತಾ ಸಮಾಜ ಸೇವಾ ಟ್ರಸ್ಟ್ (ರಿ) ಪದ್ಮಭೂಷಣ ಡಾ ಎ. ಪಿ .ಜೆ ಅಬ್ದುಲ್ ಕಲಾಂರವರ 90ನೇ ಜನ್ಮದಿನಾಚರಣೆಯ ಅಂಗವಾಗಿ ನೀಡುವ ಪದ್ಮಭೂಷಣ ಡಾ ಎ. ಪಿ. ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 13 ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸುವರು.
ಡಾ ಮಾಲತಿ ಶೆಟ್ಟಿ ಮಾಣೂರು ಈಗಾಗಲೇ 9 ಕೃತಿಗಳನ್ನು ಬರೆದಿದ್ದಾರೆ 8 ವರುಷದಿಂದ ಸಾಹಿತ್ಯಪರ, ಸದಅಭಿರುಚಿಯ ಅಮೃತ ಪ್ರಕಾಶ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ ಪತ್ರಿಕೆ ವತಿಯಿಂದ 34ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಇವರಿಗೆ 6ರಾಜ್ಯ ಪ್ರಶಸ್ತಿ, 3 ರಾಷ್ಟ್ರ ಪ್ರಶಸ್ತಿ, ಪ್ರಾಪ್ತವಾಗಿದೆ. 2018ರಲ್ಲಿ ಗೌರವ ಡಾಕ್ಟರೆಟ್ ಚೆನ್ನೈನಲ್ಲಿ ನೀಡಿ ಗೌರವಿಸಿದ್ದಾರೆ. ಕಳೆದ ಹದಿನಾರು ವರ್ಷಗಳಿಂದ. ಸಾಹಿತ್ಯ ಪತ್ರಿಕೋದ್ಯಮ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಹಿರಿಯ ಯಕ್ಷಗಾನ ಕಲಾವಿದ ಮಾಣೂರಿನ ಕಿಟ್ಟಣ ಶೆಟ್ಟಿ ಮಾಣೂರು. ಹಾಗೂ ರೇವತಿ ಶೆಟ್ಟಿ ಮಾಣೂರು ದಂಪತಿಗಳ ಸುಪುತ್ರಿ.
ಪ್ರಸ್ತುತ ಮಂಗಳೂರಿನ ಅತ್ತಾವರದ ವೈದ್ಯನಾಥ ನಗರ ಸಾಹಿತ್ಯ ನಂದನದಲ್ಲಿ ಪತಿ ಸತ್ಯಪ್ರಕಾಶ್ ಶೆಟ್ಟಿ ಅವರೊಂದಿಗೆ ವಾಸವಾಗಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment