ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಪ್ಪಿನಂಗಡಿ; ಕೆಎಸ್ಆರ್ ಟಿಸಿ ಬಸ್ ಅಡಿಗೆ ಬಿದ್ದು ತಾಯಿ ಮತ್ತು ಮಗು ದಾರುಣ ಸಾವು

ಉಪ್ಪಿನಂಗಡಿ; ಕೆಎಸ್ಆರ್ ಟಿಸಿ ಬಸ್ ಅಡಿಗೆ ಬಿದ್ದು ತಾಯಿ ಮತ್ತು ಮಗು ದಾರುಣ ಸಾವು

 


ಉಪ್ಪಿನಂಗಡಿ : ಬಸ್ ನಿಲ್ದಾಣಕ್ಕೆ ವೇಗವಾಗಿ ನುಗ್ಗಿದ ಕೆಎಸ್ಆರ್ ಟಿಸಿ ಬಸ್ ಅಡಿಗೆ ಬಿದ್ದು ತಾಯಿ ಹಾಗೂ ಒಂದು ವರ್ಷದ ಮಗು ದಾರುಣ ವಾಗಿ ಮೃತಪಟ್ಟ ಘಟನೆಯೊಂದು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.


ಮೂಲತಃ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಸಿದ್ದೀಕ್ ಎಂಬವರ ಪತ್ನಿ ಶಾಹಿದಾ (೨೫)ವರ್ಷ ಹಾಗೂ ಆಕೆಯ ಒಂದು ವರ್ಷದ ಪುತ್ರ ಶಾಹೀಲ್ ಮೃತಪಟ್ಟ ದುರ್ದೈವಿಗಳು.

ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಅವರು ಮಂಗಳವಾರ ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿ ತನ್ನ ಮಗನೊಂದಿಗೆ ತೆರಳುತ್ತಿದ್ದರು.


ಈ ವೇಳೆ ಬಸ್ ನಿಲ್ದಾಣಕ್ಕೆ ತಿರುಗುವಲ್ಲೇ ಇರುವ ನಂದಿನಿ ಹಾಲಿನ ಬೂತಿನ ಎದುರಿನಿಂದ ಮತ್ತೊಂದು ಕಡೆಗೆ ಶಾಹಿದಾ ಮಗುವಿನೊಂದಿಗೆ ದಾಟಿದ್ದು, ಈ ಸಂದರ್ಭದಲ್ಲಿ ಯಮದೂತನಂತೆ ಅತಿ ವೇಗದಿಂದ ಬಸ್ ನಿಲ್ದಾಣದೊಳಗೆ ಬಂದ ಬಸ್ , ತಾಯಿ ಮಗುವನ್ನು ಬಲಿ ತೆಗೆದುಕೊಂಡಿತು.

ಈ ಅವಘಡದಿಂದ ತಾಯಿ ಮಗು ಇವರಿಬ್ಬರ ತಲೆಯ ಮೇಲೆ ಬಸ್ ಹರಿದಿದ್ದು, ಇದರಿಂದ ತಾಯಿ- ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ

0 Comments

Post a Comment

Post a Comment (0)

Previous Post Next Post