ಬೆಂಗಳೂರು : ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿದ ಘಟನೆಯೊಂದು ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ಸಮೀಪ ನಡೆದಿದೆ.
ಹೊಸಕೆರೆಹಳ್ಳಿಯ ಶೋಭಾ ವ್ಯಾಲಿ ಅಪಾರ್ಟ್‌ಮೆಂಟ್ ನಿವಾಸಿಗಳಾದ ಪ್ರದೀಪ್ ಹಾಗೂ ಆರತಿ ದಂಪತಿ ಒಬ್ಬನೇ ಮಗ ಗಗನ್ (11 ವರ್ಷ) ಮೃತ ದುರ್ದೈವಿ.
ತನ್ನ ತಂದೆ-ತಾಯಿ ಹೊರ ಹೋಗಿದ್ದಾಗ ಗುರುವಾರ ಮಧ್ಯಾಹ್ನ ಅಪಾರ್ಟ್‌ಮೆಂಟ್‌ನ 11ನೇ ಮಹಡಿಗೆ ತೆರಳಿದ ಗಗನ್, ಅಲ್ಲಿಂದ 5ನೇ ಮಹಡಿಗೆ ಬಿದ್ದು ಮೃತಪಟ್ಟಿದ್ದಾನೆ.
ಕೆಲ ಹೊತ್ತಿನ ಬಳಿಕ ಫ್ಲ್ಯಾಟ್‌ಗೆ ಮರಳಿದ ಗಗನ್ ಪೋಷಕರು, ಮಗನಿಗೆ ಹುಡುಕಾಟ ನಡೆಸಿದಾಗ 5ನೇ ಮಹಡಿಯಲ್ಲಿ ಗಗನ್ ಮೃತದೇಹ ಪತ್ತೆಯಾಗಿದೆ. ಎಂದು ಪೊಲೀಸರು ಹೇಳಿದ್ದಾರೆ.
Post a Comment