ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2021-22ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಪುನೀತ್ ಆಯ್ಕೆಯಾದರು. ಈತ ವಿಟ್ಲದ ಸುರೇಶ್ ಪೂಜಾರಿ ಮತ್ತು ಪ್ರಮೀಳ ದಂಪತಿಗಳ ಪುತ್ರ.
ದ್ವಿತೀಯ ವಿಜ್ಞಾನ ವಿಭಾಗದ ಕುಲದೀಪ್‍ಸಿಂಗ್ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಈತನು ಕೊಡಗಿನ ಶನಿವಾರಸಂತೆಯ ಚೇತನ್ ಪ್ರಕಾಶ್ ಮತ್ತು ವಿಮಲ ರವರ ಪುತ್ರ. ಜತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಧರಿತ್ರಿ ಆಯ್ಕೆಯಾದರು. ಈಕೆ ರಾಮನಗರದ ವೆಂಕಟೇಶ ಟಿ ವಿ ಮತ್ತು ಕೆ.ಪಿ ಸುಷ್ಮಾ ದಂಪತಿಗಳ ಪುತ್ರಿ. ಪ್ರಾಂಶುಪಾಲ ಮಹೇಶ ನಿಟಿಲಾಪುರ ವಿದ್ಯಾರ್ಥಿ ಸಂಘದ ನಾಯಕರನ್ನು ಅಭಿನಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment