ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾದಲ್ಲಿ ಭಗವದ್ಗೀತಾ ಪಠಣ ಕಾರ್ಯಕ್ರಮ

ಅಂಬಿಕಾದಲ್ಲಿ ಭಗವದ್ಗೀತಾ ಪಠಣ ಕಾರ್ಯಕ್ರಮ



ಪುತ್ತೂರು: ಅಂಜಿಕೆ ಇಲ್ಲದೆ ಭಗವದ್ಗೀತೆಯನ್ನು ಸ್ಪಷ್ಟವಾಗಿ ಗಟ್ಟಿಯಾಗಿ ವ್ಯಾಕರಣಬದ್ಧವಾಗಿ ಪಠಿಸಬೇಕು. ನಾವೂ ಸಂತೋಷಪಡುತ್ತಾ ಇನ್ನೊಬ್ಬರಿಗೂ ಆನಂದವೀಯುತ್ತಾ, ನಮ್ಮ ನಗು ಇನ್ನೊಬ್ಬರಿಗೆ ನೋವು ಕೊಡದಂತೆ ಬಾಳಬೇಕು. ಈ ಸಂಸ್ಕಾರಗಳನ್ನೆಲ್ಲಾ ಅಳವಡಿಸಿಕೊಂಡು ಭಗವದ್ಗೀತೆಯನ್ನು ಪಠಿಸಬೇಕು. ಇದರಿಂದ ಸುಸಂಸ್ಕೃತರಾಗುತ್ತೇವೆ ಎಂದು ಖ್ಯಾತ ವಾಗ್ಮಿ, ಚಿಂತಕ ಶ್ರೀಕೃಷ್ಣ ಉಪಾಧ್ಯಾಯ ಅವರು ನುಡಿದರು.


ಅವರು, ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಪಠಣ ಅಭ್ಯಾಸ ಮಾಡಿಸುತ್ತಾ ಭಗವದ್ಗೀತೆಯ ಮಹತ್ವದ ಬಗ್ಗೆ ಮಾಹಿತಿ ಇತ್ತರು.


ಅಕ್ಷರಗಳ ಗಮನದ ಜೊತೆಗೆ ಭಗವಾನ್ ಶ್ರೀಕೃಷ್ಣನ ನೆನಪಲ್ಲಿ ಭಗವದ್ಗೀತೆಯನ್ನು ಹೇಳಿದಾಗ ಅದೊಂದು ಪೂಜೆಯಾಗುವುದು. ಆಗ ಮಾತ್ರ ಭಗವದ್ಗೀತೆ ಜೀವಪಡೆದುಕೊಳ್ಳುತ್ತದೆ. ಈ ರೀತಿ ಭಗವದ್ಗೀತಾ ಪಠಣ ಅಭ್ಯಾಸ ಮಾಡಿ ಎಂದು ಅವರು ತಿಳಿಸಿದರು.


ಕಾರ್ಯಕ್ರಮದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಹಿಂದಿ ಉಪನ್ಯಾಸಕಿ ಪುಷ್ಪಲತಾ, ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ ಕನ್ನಡ ಉಪನ್ಯಾಸಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಜಯಂತ್ ಸಹಕರಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post