ಬದಿಯಡ್ಕ: ನಿರಾಶ್ರಿತರಿಗೆ ಆಶ್ರಯದಾತೆಯಾದ ಕನ್ನೆಪ್ಪಾಡಿ ಆಶ್ರಯ ಆಶ್ರಮದ ಶಾರದಮ್ಮ ಅವರ 4ನೇ ಪುಣ್ಯ ತಿಥಿ ಕಾರ್ಯಕ್ರಮವು ಶುಕ್ರವಾರ ಜರಗಿತು. ನಾಡಿನ ವಿವಿಧ ಗಣ್ಯರು, ಜಲ್ಲೆಯ ವಿವಿಧ ಠಾಣೆಯ ಆರಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶಾರದಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಗೋವುಗಳಿಗೆ ಗೋಗ್ರಾಸವನ್ನು ನೀಡಿ ಆಶ್ರಮವಾಸಿಗಳೊಂದಿಗೆ ಸಹಭೋಜನಗೈದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಡಿಟೆಕ್ಟಿವ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ಕ್ರೈಂಬ್ರಾಂಚ್ ಸಲೀಂ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅವರು ಮಾತನಾಡಿ ಜನರಿಂದ ಆರಾಧಿಸಲ್ಪಡಬೇಕಾದರೆ ಅಂತಹವರು ಏನಾದರೊಂದು ಸಾಧನೆಯನ್ನು ಮಾಡಿರಬೇಕು. ಶಾರದಾ ಅಮ್ಮ ಅವರ ಸಾಧನೆಯು ಅವರನ್ನು ಎತ್ತರಕ್ಕೇರಿಸಿದೆ ಎಂಬುದನ್ನು ಇಲ್ಲಿ ಕಾಣಬಹುದು ಎಂದರು.
ಬದಿಯಡ್ಕ ಠಾಣಾಧಿಕಾರಿ ವಿನೋದ್ ಕುಮಾರ್, ಕುಂಬಳೆ ಠಾಣಾಧಿಕಾರಿ ರಾಜೀವನ್, ಸಾಮಾಜಿಕ ಕಾರ್ಯಕರ್ತ ಗಂಗಾಧರನ್ ನಾಯರ್, ಬ್ಲೋಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಮಲ್ಲಡ್ಕ, ಮಧ್ಯಾಹ್ನದ ಭೋಜನದ ಪ್ರಾಯೋಜಕರಾದ ಕುಮಾರ ಸುಬ್ರಹ್ಮಣ್ಯ ಪೈಸಾರಿ, ಆಡಳಿತ ಸಮಿತಿ ಕಾರ್ಯದರ್ಶಿ ಶಿವಶಂಕರ ಭಟ್ ಗುಣಾಜೆ ಮಾತನಾಡಿದರು.
ರಮೇಶ್ ಕಳೇರಿ, ರಾಘವೇಂದ್ರ ನಾಯಕ್ ಬದಿಯಡ್ಕ, ಉದಯ ಕಂಬಾರು, ಸುಧೀರ್ ಮುಳ್ಳೇರಿಯ, ಬದಿಯಡ್ಕ, ಆದರು ಹಾಗೂ ಕುಂಬಳೆ ಠಾಣೆಯ ಪೊಲೀಸರು ಸಹಕರಿಸಿದರು. ದಿವ್ಯಾ, ರೇಶ್ಮಾ, ಯಶಸ್ವಿನಿ ಪ್ರಾರ್ಥನೆಯನ್ನು ಹಾಡಿದರು. ಗಣೇಶಕೃಷ್ಣ ಅಳಕ್ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೇಶ್ ಮಾಸ್ಟರ್ ಅಗಲ್ಪಾಡಿ ಸ್ವಾಗತಿಸಿ ರಾಮಕೃಷ್ಣ ಹೆಬ್ಬಾರ್ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment