ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ಸುರೇಶ ನೆಗಳಗುಳಿ ಮಂಗಳೂರು ಇವರಿಗೆ 'ಗುರುಕುಲ ತಿಲಕ ಪ್ರಶಸ್ತಿ'

ಡಾ. ಸುರೇಶ ನೆಗಳಗುಳಿ ಮಂಗಳೂರು ಇವರಿಗೆ 'ಗುರುಕುಲ ತಿಲಕ ಪ್ರಶಸ್ತಿ'



ಬೆಳಗಾವಿ: ಕಸ್ತೂರಿ ಸಿರಿಗನ್ನಡ ವೇದಿಕೆ (ರಿ), ಬೆಳಗಾವಿ ವತಿಯಿಂದ ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಅಂಗವಾಗಿ 05 ಅಕ್ಟೋಬರ್ 2021 ರಂದು ಶಿಕ್ಷಕರಿಗೆ ಗೌರವ 'ಗುರುಕುಲ ತಿಲಕ ಪ್ರಶಸ್ತಿ' ಯನ್ನು ಪ್ರದಾನ ಮಾಡಲಾಯಿತು.


ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವಾಸ್ತವ್ಯವಿರುವ ವೈದ್ಯ ಶಿಕ್ಷಕ ಡಾ ಸುರೇಶ ನೆಗಳಗುಳಿ ಯವರು ಈ ಬಾರಿಯ "ಗುರು ಕುಲ‌ತಿಲಕ ಪ್ರಶಸ್ತಿ" ಗೆ ಭಾಜನರಾಗಿದ್ದಾರೆ.


ಸುಮಾರು ಮೂವತ್ತ ಎರಡು ವರ್ಷಗಳಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ, ಪ್ರಾಚಾರ್ಯ,ಪ್ರಾಧ್ಯಾಪಕರಾಗಿ ಅನುಭವ ಹೊಂದಿರುವ ಇವರು ಕೊಪ್ಪದ ಆರೂರ್ ಲಕ್ಷ್ಮೀನಾರಾಯಣ ಕಾಲೇಜಿನಲ್ಲಿ ಹಾಗೂ ಆಳ್ವಾಸ್ ಆಯುರ್ವೇದ ಕಾಲೇಜು‌ ಮೂಡುಬಿದ್ರೆಯಲ್ಲಿ ಪ್ರಾಚಾರ್ಯರೂ ಆಗಿದ್ದರಲ್ಲದೆ, ಶೋರನೂರು ಪಿ ಎನ್ ಎನ್ ಎಮ್ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾಗಿದ್ದರು.


ಇದಲ್ಲದೆ ವಿಶ್ವ ವಿದ್ಯಾಲಯದ ಹಲವಾರು ಶಿಕ್ಷಣ ಸಂಬಂಧೀ ವಿಭಾಗಗಳಲ್ಲಿ ಸಹ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ  ಮುನಿಯಾಲ್ ಆಯುರ್ವೇದ ಶಿಕ್ಷಣ ಸಂಸ್ಥೆ ಮಣಿಪಾಲದಲ್ಲಿ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ವೈದ್ಯಕೀಯ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಶ್ರೀಯುತರ ಬಹುಮುಖ ವ್ಯಕ್ತಿತ್ವವನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಕವಿತ್ತ ಕರ್ಮಮಣಿ, ಕರ್ನಾಟಕ ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ ವೇದಿಕೆ (ರಿ), ಬೆಳಗಾವಿ ಇವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post