ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 `ಗಾಂಧಿ ಸಾಗರದ ಬಿಂದುಗಳು' ಕೃತಿ ಅವಲೋಕನ

`ಗಾಂಧಿ ಸಾಗರದ ಬಿಂದುಗಳು' ಕೃತಿ ಅವಲೋಕನ



ಮೂಡುಬಿದಿರೆ: ಸ್ವಾಸ್ಥ್ಯ ಸಮಾಜಕ್ಕೆ ಗಾಂಧಿ ತತ್ವಗಳು ಅವಶ್ಯ ಎಂದು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಕೃಷ್ಣರಾಜ ಕರಬ ಹೇಳಿದರು.   


ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ನಡೆದ ಸದಾನಂದ ನಾರಾವಿಯವರ `ಗಾಂಧಿ ಸಾಗರದ ಬಿಂದುಗಳು' ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಕೃತಿಯನ್ನು ವಿಮರ್ಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶೋಷಣೆಗೆ ಒಳಾಗಾದ ಪಂಗಡ ಮತ್ತು ಗ್ರಾಮೀಣ ಜನರ ನೋವಿಗೆ ಸ್ಪಂದಿಸುವ ಗುಣ ಬೆಳಸಿಕೊಂಡರೆ, ಜಗತ್ತಿನ ಕಷ್ಟಗಳಿಗೆ ಸ್ಪಂದಿಸುವ ಸಾಮಥ್ರ್ಯ ಬೆಳೆಯುತ್ತದೆ. ಜಾತಿ ಲೆಕ್ಕಾಚಾರ ಇರದೇ ಸರ್ವ ಧರ್ಮ ಸಹಿಷ್ಣು ಭಾವನೆ ಎಲ್ಲರಲ್ಲೂ ಇರಬೇಕು, ಗಾಂಧೀಜಿಯು ಎಲ್ಲ ಧರ್ಮವನ್ನು ಗೌರವಿಸುವವರು, ಗಾಂಧಿ ತತ್ವಗಳಿಂದ ಸಮಾಜದ ಸ್ವಾಸ್ಥ್ಯತೆ ಹೆಚ್ಚುತ್ತದೆ. ಇಂತಹ ಕೃತಿಗಳನ್ನು ಪಠ್ಯ ಪುಸ್ತಕಕ್ಕೆ ಸೇರಿಸಿದರೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ನಿರ್ಮಾಣದ ಚಿಂತನೆಗಳು ಬೆಳೆಯುತ್ತದೆ ಎಂದು ಹೇಳಿದರು.


ಇದೇ ಸಂರ್ದಭದಲ್ಲಿ 'ಗಾಂಧಿ ಸಾಗರದ ಬಿಂದುಗಳು' ಪುಸ್ತಕದ ಲೇಖಕರಾದ ಸದಾನಂದ ನಾರಾವಿ, ಬದುಕಿನಲ್ಲಿ ಮೌಲ್ಯಗಳು ಬಹಳ ಮುಖ್ಯ ಹಾಗೂ ಅವುಗಳು ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಮೌಲ್ಯಗಳಿಲ್ಲದ ಮತ್ತು ವಿದ್ಯೆಯಿಲ್ಲದ ಮನುಷ್ಯರಿಗೆ, ಬೆಲೆ ಇರುವುದಿಲ್ಲ. ಕೆಲವೊಮ್ಮೆ ವಿದ್ಯೆ ಇರುವವನಿಗೆ ಹೆದರಿಕೆಯಿಂದಲೂ ಗೌರವ ಕೊಡುತ್ತಾರೆ, ಅದೇ ಮೌಲ್ಯಗಳಿರುವ ಮನುಷ್ಯರಿಗೆ ಅವರ ಆದರ್ಶಗಳೇ ಗೌರವ ತಂದು ಕೊಡುತ್ತದೆ. ಮಾನವೀಯ ಮೌಲ್ಯಗಳ ಚಿಂತನೆಗಳು ನಶಿಸಿ ಹೋಗದಂತೆ ನೋಡಿಕೊಂಡು ಮುಂದಿನ ಪೀಳಿಗೆಗೆ ತಲುಪುವಂತೆ ಮಾಡಬೇಕು ಎಂದು ತಮ್ಮ ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಕನ್ನಡ ವಿಭಾಗ ಮುಖ್ಯಸ್ಥ ಡಾ. ಯೋಗಿಶ್ ಕೈರೋಡಿ, ಉಪನ್ಯಾಸಕ ಹರೀಶ್ ಟಿ ಜಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಉಮಾಶ್ರೀ ವಂದಿಸಿದರು, ಉಪನ್ಯಾಸಕಿ ಡಾ. ಜ್ಯೋತಿ ರೈ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post