ಮಂಗಳೂರು: 'ದಸರಾ ನಾಡಹಬ್ಬದ ಸಂದರ್ಭದಲ್ಲಿ ಶಕ್ತಿದೇವತೆಯ ಆರಾಧನೆಯೊಂದಿಗೆ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಪುಲ ಅವಕಾಶ ನೀಡುತ್ತಿರುವುದು ಕನ್ನಡ ನಾಡಿನ ಪರಂಪರೆ.ಮೈಸೂರಿನಲ್ಲಿ ಆ ಪರಂಪರೆ ಈಗಲೂ ಮುಂದುವರಿಯುತ್ತಿದೆ. ಇದೀಗ ಕಳೆದೆರಡು ವರ್ಷಗಳಿಂದ ಮಂಗಳೂರು ದಸರಾದ ಅಂಗವಾಗಿ ಕರಾವಳಿ ಕಾವ್ಯಧಾರೆಯನ್ನು ನಡೆಸಲಾಗುತ್ತಿದೆ' ಎಂದು ಸಾಹಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಮಂಗಳೂರು ದಸರಾ ವಿಶೇಷವಾಗಿ ನಮ್ನ ಕುಡ್ಲ ಬಿ.ಪಿ. ಕರ್ಕೇರ ಸಭಾಂಗಣದಲ್ಲಿ ಜರಗಿದ 'ದಸರಾ ಕವಿಮೇಳ- 2021' ಕರಾವಳಿ ಕಾವ್ಯಧಾರೆಯ ಸಮನ್ವಯಕಾರರಾಗಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕವಿಗಳಾದ ಡಾ. ವಸಂತ ಕುಮಾರ್ ಪೆರ್ಲ, ಕರುಣಾಕರ ಬಳ್ಕೂರ್, ಹರೀಶ್ ಸುಲಾಯ ಒಡ್ಡಂಬೆಟ್ಟು, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ರೂಪಕಲಾ ಆಳ್ವ, ಶಾಂತಾ ಕುಂಟಿನಿ ಶಕುಂತಳಾ, ಪ್ರಶಾಂತಿ ಶೆಟ್ಟಿ ಇರುವೈಲ್ ಮತ್ತು ರಮಿತಾ ಕುತ್ತಾರ್ ಸ್ವರಚಿತ ಕನ್ನಡ- ತುಳು ಕವಿತೆಗಳನ್ನು ವಾಚಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಅವರು 'ವಿದ್ಯಾರಣ್ಯ ಸ್ಫೂರ್ತಿ' ಕವಿತೆಯನ್ನು ಪ್ರಸ್ತುತಪಡಿಸಿದರು.
ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಸ್ವಾಗತಿಸಿದರು. ಕಾರ್ಯಕ್ರಮ ನಿರ್ಮಾಪಕ ಶ್ರೀಕಾಂತ್ ರಾವ್ ವಂದಿಸಿದರು. ಸುರೇಖಾ ಶೆಟ್ಟಿ ನಿರೂಪಿಸಿದರು. ಅಕ್ಟೋಬರ್ 8, 2021 ರಂದು ಮಧ್ಯಾಹ್ನ1.30 ಕ್ಕೆ ಈ ಕಾರ್ಯಕ್ರಮ ನಮ್ಮ ಕುಡ್ಲ ಸ್ಥಳೀಯ ವಾಹಿನಿಯಲ್ಲಿ ಪ್ರಸಾರವಾಗುವುದೆಂದು ಪ್ರಕಟಣೆ ತಿಳಿಸಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment