ಹಾವೇರಿ: ಬಸ್ ಪ್ರಯಾಣದ ವೇಳೆ ನಿದ್ದೆ ಮಾಡುತ್ತಿದ್ದ ಪ್ರಯಾಣಿಕ ಕೈಕಳೆದುಕೊಂಡಿದ್ದಾನೆ. ಹಿರೆಕೆರೂರಿನ ನದೀಮ್(28)ವರ್ಷ ಕೈ ಕಳೆದುಕೊಂಡ ಪ್ರಯಾಣಿಕ ಎಂದು ಹೇಳಲಾಗಿದೆ.
ಅಂಕೋಲಾದಿಂದ ಶಿರಸಿಗೆ ಬಸ್ ನಲ್ಲಿ ಪ್ರಯಾಣ ಮಾಡುವಾಗ ಆತ ನಿದ್ದೆಗೆ ಜಾರಿದ್ದಾನೆ.
ನಿದ್ದೆಯ ಮಂಪರಿನಲ್ಲಿ ಕಿಟಕಿಯಿಂದ ಹೊರಗೆ ಕೈ ಚಾಚಿದ್ದು, ಎದುರಿನಿಂದ ವೇಗವಾಗಿ ಬಂದ ಲಾರಿ ಕೈಗೆ ತಾಗಿದ್ದರಿಂದ ಕೈ ಭಾಗ ಕಟ್ ಆಗಿದೆ ಎನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ನದೀಮ್ ಅವನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
Post a Comment