ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉದ್ಯಮದಲ್ಲಿ ಅತಿಯಾಸೆ ಅಧಃಪತನಕ್ಕೆ ದಾರಿ: ಡಾ. ಆನಂದ್ ಉಪಾಧ್ಯಾಯ

ಉದ್ಯಮದಲ್ಲಿ ಅತಿಯಾಸೆ ಅಧಃಪತನಕ್ಕೆ ದಾರಿ: ಡಾ. ಆನಂದ್ ಉಪಾಧ್ಯಾಯ



ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗ, ವಾಣಿಜ್ಯ ಸಂಘ ಮತ್ತು ಕನ್ಸ್ಯೂಮರ್ ಕ್ಲಬ್ಗಳು ಇತ್ತೀಚೆಗೆ ಜಂಟಿಯಾಗಿ 'ಸಾಂಸ್ಥಿಕ ನೈತಿಕತೆ ಮತ್ತು ಸುಸ್ಥಿರ ಬೆಳವಣಿಗೆ- ಸಾಂಕ್ರಾಮಿಕ ನಂತರದ ದೃಷ್ಟಿಕೋನʼ ಎಂಬ ಅಂತಾರಾಷ್ಟ್ರೀಯ ಜಾಲಗೋಷ್ಠಿಯೊಂದನ್ನು ಆಯೋಜಿಸಿದ್ದವು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಉದ್ಯಮದಲ್ಲಿ ನಮ್ಮ ನಿರ್ಧಾರಗಳು ಸಮಾಜಕ್ಕೆ ಪೂರಕವಾಗಿರಬೇಕು, ನ್ಯಾಯಯುತವಾಗಿರಬೇಕು, ಇತರರೆಡೆಗೆ ಸಹಾನುಭೂತಿ ಹೊಂದಿರಬೇಕು, ಎಂದು ಅಭಿಪ್ರಾಯಪಟ್ಟರು.


ಸಂಪನ್ಮೂಲ ವ್ಯಕ್ತಿ ಮಸ್ಕತ್‌ನ ಕಾಲೇಜ್ ಆಫ್ ಬ್ಯಾಂಕಿಂಗ್ ಆಂಡ್ ಫಿನಾನ್ಷಿಯಲ್ ಸ್ಟಡೀಸ್‌ನ ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಆನಂದ್ ಉಪಾಧ್ಯಾಯ, ಉದ್ಯಮದಲ್ಲಿ ಜನರು, ಲಾಭ ಗಳಿಕೆ ಮತ್ತು ನಮ್ಮ ಜಗತ್ತು, ಈ ಮೂರೂ ಮುಖ್ಯ.  ನೈತಿಕತೆ ಇರುವ ನಾಯಕರಿಂದ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ. ಅತಿಯಾಸೆ ಕಾರ್ಪೊರೇಟ್ ಕಂಪೆನಿಗಳ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.


ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಉದಯ ಕುಮಾರ್ ಎಂ ಎ ಮಾತನಾಡಿ, ಉದ್ಯಮದಲ್ಲಿ ನಮ್ಮ ನಿರ್ಧಾರಗಳು ಮುಕ್ತ, ಪಾರದರ್ಶಕ ಮತ್ತು ನೈತಿಕವಾಗಿರಬೇಕು, ಎಂದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಕೊವಿಡ್ ಸಾಂಕ್ರಾಮಿಕ ನಮಗೆ ನೈತಿಕತೆ, ಮಾನವೀಯತೆಯ ಪಾಠ ಕಲಿಸಿದೆ, ಎಂದು ಅಭಿಪ್ರಾಯಪಟ್ಟರು.


ವಾಣಿಜ್ಯ ಸಂಘದ ಸಹಾಯಕ ನಿರ್ದೇಶಕ ಡಾ.ಎ. ಸಿದ್ಧಿಕ್ ಅತಿಥಿಗಳನ್ನು ಸ್ವಾಗತಿಸಿದರು. ಜಯಶ್ರೀ ಭರತ್ ಕಾರ್ಯಕ್ರಮ ನಿರೂಪಿಸಿದರೆ, ಭವ್ಯಾ, ವಿದ್ಯಾ ಕಿಶನ್ ಆಳ್ವಾ, ಪುಷ್ಪಲತಾ ಮೊದಲಾದವರು ಸಹಕರಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post